ಕರ್ನಾಟಕ

karnataka

ETV Bharat / sitara

ಲಂಚ ನೀಡಿದರೆ ಇಲ್ಲಿ ಎಲ್ಲವೂ ಮಾಫಿ: ಮೋದಿ ರಾಮ ರಾಜ್ಯ  ಪ್ರಶ್ನಿಸಿದ ತನುಶ್ರೀ ದತ್ತಾ

ಸಾಕ್ಷ್ಯಾಧಾರಗಳ ಕೊರತೆಯಿಂದ ಲೈಂಗಿಕ ದೌರ್ಜನ್ಯ ಆರೋಪ ಹೊತ್ತ ಬಾಲಿವುಡ್​ನ ಹಿರಿಯ ನಟ ನಾನಾ ಪಾಟೇಕರ್‌ ಪ್ರಕರಣದಿಂದ ಹೊರಬಂದಿದ್ದಾರೆ. ಪಾಟೇಕರ್​ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಆರೋಪ ಮಾಡಿದ್ದ ನಟಿ ತನುಶ್ರೀ ದತ್ತ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನು ಬಿದ್ದಿದ್ದಾರೆ.

ಸಂಗ್ರಹ ಚಿತ್ರ

By

Published : Jun 17, 2019, 11:35 AM IST

ಚಿತ್ರೀಕರಣದ ವೇಳೆ ನನ್ನ ಮೇಲೆ ನಾನಾ ಪಾಟೇಕರ್‌ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನಟಿ ತನುಶ್ರೀ ದತ್ತ ದೂರು ದಾಖಲಿಸಿದ್ದರು. ಪ್ರಕರಣ ದೇಶಾದಾದ್ಯಂತ ಭಾರಿ ಸದ್ದು ಮಾಡಿತ್ತು. ಮೀ ಟೂ ಎಂಬ ಅಭಿಯಾನವೂ ಶುರುವಾಗಿತ್ತು.

ಕ್ರಮೇಣ ಸಾಕಷ್ಟು ನಟಿಯರು ನಟರ ಮೇಲೆ ದೂರು ನೀಡುವ ಮೂಲಕ ತಮ್ಮ ನೋವವನ್ನು ಹೊರಹಾಕಿದ್ದರು. ಮೊದಲನೇ ಮೀ ಟೂ ಆರೋಪ ಹೊತ್ತ ನಟ ನಾನಾ ಪಾಟೇಕರ್‌ ಸಾಕ್ಷ್ಯಾಧಾರಗಳ ಕೊರತೆಯಿಂದ ಇದೀಗ ಪ್ರಕರಣದಿಂದ ಹೊರಬಂದಿದ್ದಾರೆ. ಮನನೊಂದ ತನುಶ್ರೀ ದತ್ತ, ಪ್ರಧಾನಿ ಮೋದಿ ಅವರನ್ನೇ ನೇರವಾಗಿ ಟಾರ್ಗೆಟ್​ ಮಾಡಿದ್ದಾರೆ.

ಮುಂಬೈ ಪೊಲೀಸರು ಆರೋಪಿಯಿಂದ ಹಣ ತೆಗೆದುಕೊಂಡು ಅವರನ್ನು ರಕ್ಷಿಸಿದ್ದಾರೆ ಎಂದು ಆರೋಪಿಸಿರುವ ತನುಶ್ರೀ, ಕಿರುಕುಳ ನೀಡಿದ್ದರ ಬಗ್ಗೆ ಬಲವಾದ ಸಾಕ್ಷಿ ನೀಡಿದ್ದೆ. ಆದರೆ, ಅದೆಲ್ಲದರ ಹೊರತಾಗಿಯೂ ನನಗೆ ಸೋಲಾಗಿದೆ. ಏಕೆ ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಹಣ ತೆಗೆದುಕೊಂಡು ಉದೇಶಪೂರ್ವಕವಾಗಿ ಸುಳ್ಳು ಸಾಕ್ಷಿ ಹುಟ್ಟಿ ಹಾಕಿದ್ದಾರೆ. ಈ ಕಿರುಕುಳದ ಹೊರತಾಗಿಯೂ ನಾನು ವಿದೇಶದಲ್ಲಿ ನನ್ನ ಜೀವನವನ್ನು ನಡೆಸಬಹುದಿತ್ತು. ಆದರೆ, ಭಾರತದಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ನಾನು ಮತ್ತೆ ಇಲ್ಲಿಗೆ ಬರಬೇಕಾಯಿತು. ಕಾನೂನುಗಳು ಇಲ್ಲಿ ಮಾರಾಟಕ್ಕಿವೆ ಎಂದು ಈಗ ಗೊತ್ತಾಯಿತು. ಹಣದಿಂದ ಇಲ್ಲಿ ಎಲ್ಲವನ್ನು ಖರೀದಿಸಬಹುದು. ಲಂಚ ನೀಡಿದರೆ ಇಲ್ಲಿ ಎಲ್ಲವೂ ಮಾಫಿ. ನಿಮ್ಮ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಏನಾಯಿತು ಎಂದು ಪ್ರಶ್ನಿಸಿರುವ ತನುಶ್ರೀ, ದೇಶದ ಮಗಳು ಅನ್ಯಾಯಕ್ಕೊಳಗಾಗಿದ್ದಾಳೆ.

ಆಕೆಗೆ ಬೆದರಿಕೆ ಹಾಕಲಾಗುತ್ತಿದೆ. ನಿಮ್ಮ ಪೊಲೀಸ್​ ಹಾಗೂ ನ್ಯಾಯಾಂಗ ವ್ಯವಸ್ಥೆಯಿಂದ ನನಗೆ ಹಿನ್ನಡೆಯಾಗಿದೆ. ನಿಮ್ಮ ರಾಮ ರಾಜ್ಯದ ಕನಸು ಎಲ್ಲಿದೆ? ಅಧರ್ಮ ಪದೇ ಪದೆ ಗೆಲ್ಲುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದ್ದಾರೆ.

ABOUT THE AUTHOR

...view details