ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಮಂಗಳಯಾನದ ಕಥೆ ಹೊಂದಿರುವ, ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಿಷನ್ ಮಂಗಲ್' ಟೀಸರ್ ಬಿಡುಗಡೆಯಾಗಿದೆ. 4 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್ ಕೂಡಾ ಭಾರೀ ಕುತೂಹಲ ಹುಟ್ಟಿಸಿತ್ತು.
'ಮಿಷನ್ ಮಂಗಲ್' ಟೀಸರ್ ರಿಲೀಸ್: ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ - undefined
ಜನಸಾಮಾನ್ಯರು ತಮ್ಮ ಜೀವನದಲ್ಲಿ ವಿಶೇಷವಾದದ್ದನ್ನು ಸಾಧಿಸಿ ಹೇಗೆ ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದರ ಕಥೆ ಹೊಂದಿರುವ 'ಮಿಷನ್ ಮಂಗಲ್' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಆಗಸ್ಟ್ 15 ರಂದು ತೆರೆ ಕಾಣುತ್ತಿದೆ.

ಜಗನ್ ಶಕ್ತಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಜ್ಞಾನಿ ರಾಕೇಶ್ ಧವನ್ ಜೀವನಚರಿತ್ರೆಯ ಕಥೆಯನ್ನೊಳಗೊಂಡಿದೆ. ಅಕ್ಷಯ್ ಕುಮಾರ್, ರಾಕೇಶ್ ಧವನ್ ಪಾತ್ರದಲ್ಲಿ ನಟಿಸಿದ್ದಾರೆ. ಜನಸಾಮಾನ್ಯರು ತಮ್ಮ ಜೀವನದಲ್ಲಿ ವಿಶೇಷವಾದದ್ದನ್ನು ಸಾಧಿಸಿ ಹೇಗೆ ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೇಪ್ ಆಫ್ ಗುಡ್ ಫಿಲಮ್ಸ್, ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಹಾಗೂ ಹೋಪ್ ಪ್ರೊಡಕ್ಷನ್ಸ್ ಜೊತೆ ಸೇರಿ ಸಿನಿಮಾವನ್ನು ನಿರ್ಮಿಸಿವೆ. ವಿದ್ಯಾಬಾಲನ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್, ಕನ್ನಡದ ಹಿರಿಯ ನಟ ದತ್ತಣ್ಣ ಹಾಗೂ ಇನ್ನಿತರರು ನಟಿಸಿರುವ ಸಿನಿಮಾ ಆಗಸ್ಟ್ 15 ರಂದು ತೆರೆ ಕಾಣುತ್ತಿದೆ.
ಇತ್ತೀಚೆಗೆ ತಮ್ಮ ಟ್ವಿಟ್ಟರ್ನಲ್ಲಿ ಸಿನಿಮಾ ಬಗ್ಗೆ ಪೋಸ್ಟ್ ಹಾಕಿರುವ ಅಕ್ಷಯ್ ಕುಮಾರ್ 'ಮಿಷನ್ ಮಂಗಲ್, ಪ್ರತಿಯೊಬ್ಬರಿಗೂ ಸ್ಫೂರ್ತಿ ಹಾಗೂ ಮನರಂಜನೆ ನೀಡುವ ಸತ್ಯಕಥೆ ಆಧಾರಿತ ಸಿನಿಮಾ. ಈ ಸಿನಿಮಾವನ್ನು ವಿಶೇಷವಾಗಿ ನನ್ನ ಮಗಳಿಗೆ ಹಾಗೂ ನನ್ನ ಮಗಳಿನ ವಯಸ್ಸಿನ ಎಲ್ಲಾ ಮಕ್ಕಳಿಗೆ ಅರ್ಪಿಸುತ್ತಿದ್ದೇನೆ. ಏಕೆಂದರೆ ಇದು ನಮ್ಮ ದೇಶ ಹೆಮ್ಮೆ ಪಟ್ಟಂಥ ಮಂಗಳಯಾನದ ನೈಜಕಥೆ' ಎಂದು ಹೇಳಿಕೊಂಡಿದ್ದರು.