ಕರ್ನಾಟಕ

karnataka

ETV Bharat / sitara

200ಕೋಟಿ ಕ್ಲಬ್​ ಸೇರಿದ  'ಮಿಷನ್ ಮಂಗಲ್'... 200ಕೋಟಿ ರೂ. ಗಳಿಸಿದ ಅಕ್ಷಯ್​ ಮೊದಲ ಚಿತ್ರ! - ಮಿಷನ್ ಮಂಗಲ್

ಅಕ್ಷಯ್​ ಕುಮಾರ್​ ನಟನೆಯ ಬಹುನೀರಿಕ್ಷಿತ ಬಾಲಿವುಡ್​ ಸಿನಿಮಾ 'ಮಿಷನ್​ ಮಂಗಲ್​' 200ಕೋಟಿ ರೂ ಕ್ಲಬ್​ ಸೇರಿದ್ದು, ಇದೇ ಮೊದಲ ಬಾರಿಗೆ ಈ ನಟನ ಚಿತ್ರವೊಂದು ಡಬಲ್​ ಸೆಂಚುರಿ ಬಾರಿಸಿದೆ.

ಮಿಷನ್​ ಮಂಗಲ್​​ ಮೂವಿ

By

Published : Sep 13, 2019, 5:12 PM IST

ಮುಂಬೈ:ಬಾಲಿವುಡ್​ ನಟ ಅಕ್ಷಯ್ ಕುಮಾರ್, ಕನ್ನಡದ ಹಿರಿಯ ನಟ ದತ್ತಣ್ಣ, ಬಾಲಿವುಡ್ ನಟಿಯರಾದ ವಿದ್ಯಾ ಬಾಲನ್, ಸೊನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್ ಮುಂತಾದವರು ಅಭಿನಯಿಸಿರುವ ಮಿಷನ್ ಮಂಗಲ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸದ್ದು ಮಾಡಿದ್ದು, 200ಕೋಟಿ ಕ್ಲಬ್​ ಸೇರಿದೆ.

52 ವರ್ಷದ ಅಕ್ಷಯ್ ಕುಮಾರ್ ನಟನೆಯ ಚಿತ್ರ ಇದೇ ಮೊದಲ ಬಾರಿಗೆ 200ಕೋಟಿ ರೂ ಕ್ಲಬ್​ ಸೇರಿದ್ದು, ಭಾರತದಲ್ಲೇ 200ಕೋಟಿ ರೂ ಗಳಿಕೆ ಮಾಡಿದೆ. ಆಗಸ್ಟ್​ 15ರಂದು ದೇಶಾದ್ಯಂತ ರಿಲೀಸ್​ ಆಗಿದ್ದ ಈ ಮೂವಿ ಮೊದಲ ವಾರದಲ್ಲೇ 128.16ಕೋಟಿ ರೂ, ಎರಡನೇ ವಾರ 49.95ಕೋಟಿ ರೂ ಮೂರನೇ ವಾರ 15.03ಕೋಟಿ ಹಾಗೂ 4ನೇ ವಾರ 7.02 ಕೋಟಿ ರೂ ಗಳಿಕೆ ಮಾಡಿದ್ದು, ಇಲ್ಲಿಯವರೆಗೆ 200.16 ಕೋಟಿ ಹಣ ಗಳಿಕೆ ಮಾಡಿದೆ.

ವಿಶೇಷವೆಂದರೆ ಅಕ್ಷಯ್​ ಕುಮಾರ್​​ ನಟನೆ ಮಾಡಿರುವ ಮೊದಲ ಚಿತ್ರ ಇಷ್ಟೊಂದು ಹಣ ಗಳಿಕೆ ಮಾಡಿದ್ದು, ಇದೇ ಮೊದಲ ಬಾರಿಗೆ ಅವರ ಚಿತ್ರ ದ್ವಿಶತಕ ಬಾರಿಸಿದೆ. ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರವನ್ನು ನೋಡಿ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ABOUT THE AUTHOR

...view details