ಕರ್ನಾಟಕ

karnataka

ETV Bharat / sitara

ಕಾಣೆಯಾದ ಸುಶಾಂತ್ ಡೈರಿ ಪುಟಗಳೇ ಪ್ರಮುಖ ಆಧಾರವಾಗಿತ್ತು...ವಕೀಲ ವಿಕಾಸ್ ಸಿಂಗ್​ - ಸುಶಾಂತ್ ಪರ ವಕೀಲ ವಿಕಾಸ್ ಸಿಂಗ್

ಸುಶಾಂತ್ ಸಿಂಗ್ ರಜಪೂತ್ ಬರೆಯುತ್ತಿದ್ದ ಡೈರಿಯಿಂದ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ತಿಳಿಯಬಹುದಿತ್ತು. ಆದರೆ ಈಗ ಆ ಪುಟಗಳು ಕಾಣೆಯಾಗಿವೆ ಎಂದು ಸುಶಾಂತ್ ಪರ ವಕೀಲ ವಿಕಾಶ್ ಸಿಂಗ್ ಹೇಳಿದ್ದಾರೆ.

sushant diary pages torned
ಸುಶಾಂತ್ ಸಿಂಗ್ ರಜಪೂತ್

By

Published : Aug 8, 2020, 6:00 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆಯುತ್ತಲೇ ಇದೆ. ಒಂದೆಡೆ ಸುಶಾಂತ್ ನಿಧನರಾದಾಗಿನಿಂದ ಬಾಲಿವುಡ್​​​ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ, ಮತ್ತೊಂದೆಡೆ ರಿಯಾ ಚಕ್ರವರ್ತಿ ಮೇಲೆ ಆರೋಪ, ಇದರ ಜೊತೆಗೆ ಸ್ಟಾರ್​​ ಮಕ್ಕಳೊಂದಿಗೆ ಕಂಗನಾ ಅಭಿಮಾನಿಗಳ ಟ್ವೀಟ್ ವಾರ್​​​​​​.

ಇದಕ್ಕಿಂತ ಪ್ರಮುಖ ವಿಚಾರ ಎಂದರೆ ಸುಶಾಂತ್ ಸಿಂಗ್ ಡೈರಿಯ ಕೊನೆಯ ಪುಟಗಳನ್ನು ಯಾರೋ ಹರಿದುಹಾಕಿದ್ದು, ಈ ಕೊನೆಯ ಪುಟಗಳಿಂದ ಸುಶಾಂತ್ ಸಾವಿಗೆ ಕಾರಣ ಯಾರು ಎಂಬ ವಿಚಾರವನ್ನು ಕಂಡುಹಿಡಿಯಬಹುದಿತ್ತು ಎಂದು ಸುಶಾಂತ್ ಸಿಂಗ್ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸುಶಾಂತ್ ಬರೆಯುತ್ತಿದ್ದ ಡೈರಿ ಬಹಳ ಮುಖ್ಯವಾದದ್ದು. ಸುಶಾಂತ್ ಪ್ರತಿಯೊಂದನ್ನು ತಮ್ಮ ಡೈರಿಯಲ್ಲಿ ಬರೆಯುತ್ತಿದ್ದರು. ಒಂದು ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡದ್ದೇ ಆದಲ್ಲಿ ಅದಕ್ಕೆ ಕಾರಣ ಯಾರು ಎಂಬುದನ್ನು ಕೂಡಾ ಅವರು ಡೈರಿಯಲ್ಲಿ ಬರೆದಿರಬಹುದು. ಆದರೆ ಈಗ ಆ ಕೊನೆಯ ಪುಟಗಳು ಮಿಸ್ ಆಗಿವೆ ಎಂದು ವಿಕಾಸ್ ಸಿಂಗ್ ಹೇಳಿದ್ದಾರೆ.

ತನಿಖಾಧಿಕಾರಿಗಳು ಈ ಬಗ್ಗೆ ಕೂಲಂಕುಶ ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ದೊರೆಯುವ ನಂಬಿಕೆ ಇದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕಾನೂನಿನ ಅಡಿಯಲ್ಲಿ ಯಾವುದೇ ಪರಿಮಿತಿ ಇಲ್ಲ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂಬೈನಲ್ಲಿ ಆದ್ದರಿಂದ ಈ ಪ್ರಕರಣ ಮುಂಬೈನಲ್ಲಿ ದಾಖಲಾಗಿದ್ದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಸುಶಾಂತ್ ತಂದೆ ಬಿಹಾರದ ಪಾಟ್ನಾದಲ್ಲಿ ನೆಲೆಸಿದ್ದು ಅಲ್ಲಿಯೇ ಅವರು ರಿಯಾ ಚಕ್ರವರ್ತಿ ಬಗ್ಗೆ ದೂರು ನೀಡಿದ್ದರಿಂದ ಬಿಹಾರ ಪೊಲೀಸರು ಅದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಾವು ಇದನ್ನು ಕೊಲೆ ಎಂದು ಪರಿಗಣಿಸಿಲ್ಲ. ಇದು ಆತ್ಮಹತ್ಯೆಗೆ ಪ್ರಚೋದನೆ ಎಂದಷ್ಟೇ ಹೇಳಬಹುದು. ಆದರೆ ಸುಶಾಂತ್ ಅಭಿಮಾನಿಗಳು ಮಾತ್ರ ಇದು ಉದ್ದೇಶಿತ ಕೊಲೆ ಎಂದು ಹೇಳುತ್ತಿದ್ದಾರಷ್ಟೇ. ಒಂದು ವೇಳೆ ಇದು ಕೊಲೆಯೇ ಆಗಿದ್ದಲ್ಲಿ ಸುಶಾಂತ್ ಮನೆಯಲ್ಲಿ ಇದ್ದ ಅವರ ಸಿಬ್ಬಂದಿ ಹಾಗೂ ರಿಯಾ ಚಕ್ರವರ್ತಿ ಮಾತ್ರ ಇದರಲ್ಲಿ ಭಾಗಿಯಾಗಿರುತ್ತಾರೆ ಆದರೆ ಇದು ಕೊಲೆ ಎಂಬುದರ ಬಗ್ಗೆ ನಮಗೆ ನಿಖರ ಸಾಕ್ಷಿ ಇಲ್ಲ. ಒಂದು ವೇಳೆ ಸಿಬಿಐ ತನಿಖೆ ಆದರೆ ಈ ಪ್ರಕರಣದ ನಿಜವಾದ ಸತ್ಯ ಹೊರ ಬರುತ್ತದೆ ಎಂದು ಸುಶಾಂತ್ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details