ಮುಂಬೈ :ನಟ ಸುಶಾಂತ್ ಸಿಂಗ್ (Sushant Singh) ಬದುಕಿದ್ದರೆ ಇಂದು 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುತ್ತಿದ್ದರು. ಆದ್ರೆ, ಅವರು ಇಂದು ನಮ್ಮೊಂದಿಗೆ ಇಲ್ಲ. ನಟಿ ರಿಯಾ ಚಕ್ರವರ್ತಿ ಇಂದು ಅವರನ್ನು ನೆನಪಿಸಿಕೊಂಡಿದ್ದಾರೆ.
ಕೆಲವು ವರ್ಷಗಳಿಂದ ಸುಶಾಂತ್‌ರೊಂದಿಗೆ ಡೇಟಿಂಗ್ ನಡೆಸುತ್ತಿದ್ದ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಶಾಂತ್‌ರೊಂದಿಗಿನ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿರುವುದರೊಂದಿಗೆ ಮಿಸ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. 34 ವರ್ಷದ ನಟ ಜೂನ್ 14, 2020ರಂದು ಉಪನಗರ ಬಾಂದ್ರಾದಲ್ಲಿನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸುಶಾಂತ್ ಸಿಂಗ್ ಜತೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಸೆರೆ ಹಿಡಿದ ವಿಡಿಯೋವೊಂದನ್ನು ರಿಯಾ ಹಂಚಿಕೊಂಡಿದ್ದಾರೆ. "ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ನಟಿ ಹೃದಯದ ಎಮೋಜಿಯೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ:'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್.. ಅಂದಾದ್ರೂ ಬಿಡುಗಡೆಯಾಗುತ್ತಾ ಚಿತ್ರ?