ಚಂಡೀಗಢ: ರೂಪದರ್ಶಿ ಹರ್ನಾಜ್ ಕೌರ್ ಸಂಧು 2021ರ ಭುವನ ಸುಂದರಿ ಪಟ್ಟವನ್ನು ಧರಿಸಿಕೊಂಡಿದ್ದಾರೆ. 21 ವರ್ಷಗಳ ಬಳಿಕ ಭಾರತದ ಸಂಧು ಮಿಸ್ ಯುನಿವರ್ಸ್ ಕಿರೀಟ ಧರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಇನ್ನು ವರ್ಣರಂಜಿತ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ ಸಂಧು ಆನಂದಬಾಷ್ಪ ಸುರಿಸಿದರು.
ಭುವನ ಸುಂದರಿ ಪ್ರಶಸ್ತಿ ಗೆದ್ದ ಹರ್ನಾಜ್ ಕೌರ್ ಸಂಧು ಚಂಡೀಗಢದಗುರುದಾಸ್‌ಪುರದವರಾದ ಸುಂದರಿ ಸಂದು 70ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮೊದಲನೆಯದಾಗಿ (1994) ಬಾಲಿವುಡ್‌ನ ಖ್ಯಾತ ನಟಿ ಸುಶ್ಮಿತಾ ಸೇನ್ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದರು. ಈ ಸಾಲಿನ ಭುವನ ಸುಂದರಿ ಪಟ್ಟ ಸಂಧುಗೆ ಸಿಕ್ಕಿದೆ.
ನನ್ನ ಕನಸು ಇದಾಗಿರಲಿಲ್ಲ:
ಭುವನ ಸುಂದರಿ ಪಟ್ಟ ಧರಿಸಿಕೊಂಡಿರುವ ಹರ್ನಾಜ್ ಕೌರ್ ಸಂಧು ರೂಪದರ್ಶಿ ಆಗುವುದಕ್ಕೂ ಮುನ್ನ ತಮ್ಮ ಕನಸಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದಲ್ಲಿ ಮೊದಲ ಆಯ್ಕೆ ಇದಾಗಿರಲಿಲ್ಲ. ನಾನು ಬಾಲ್ಯದಿಂದಲೂ ನ್ಯಾಯಾಧೀಶರಾಗುವ ಕನಸು ಕಂಡಿದ್ದೆ ಎಂದು ತಮ್ಮ ಬಾಲ್ಯದ ಆಸೆ ಬಗ್ಗೆ ಬಹಿರಂಗಪಡಿಸಿದ್ದಾರೆ.
ಭುವನ ಸುಂದರಿ ಪ್ರಶಸ್ತಿ ಗೆದ್ದ ಹರ್ನಾಜ್ ಕೌರ್ ಸಂಧು ಸದ್ಯ ಕುಟುಂಬದೊಂದಿಗೆ ಮೊಹಾಲಿಯಲ್ಲಿ ನೆಲೆಸಿರುವ ಭುವನ ಸುಂದರಿ ಸಂದು ಆಯ್ಕೆ ಬಗ್ಗೆ ಮಾಜಿ ಮಿಸ್ ಯುನಿವರ್ಸ್ ಲಾರಾ ದತ್ತ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರು ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಹೇಳಿದ್ದಾರೆ.
ಹರ್ನಾಜ್ ಬಾಲ್ಯದ ಶಿಕ್ಷಣ:
ಚಂಡೀಗಢದಲ್ಲಿ ಶಿವಾಲಿಕ್ ಶಾಲೆ ಮತ್ತು ಖಾಲ್ಸಾ ಶಾಲೆಯಲ್ಲಿ ತಮ್ಮ ಮೊದಲ ಹಂತದ ಮತ್ತು ಉನ್ನತ ಹಂತದ ಶಿಕ್ಷಣ ಪೂರೈಸಿದ ಸಂಧು ಸದ್ಯ ಸ್ನಾತಕೋತ್ತರ ಪದವಿಯ ನಿರೀಕ್ಷೆಯಲ್ಲಿದ್ದಾರೆ. ಬಾಲ್ಯದಲ್ಲಿ ನ್ಯಾಯಾಧೀಶರಾಗುವ ಕನಸು ಕಂಡಿದ್ದ 21 ವರ್ಷದ ಹರ್ನಾಜ್ ಸಂಧು ಮಾಡೆಲಿಂಗ್ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದೇ ಒಂದು ಅಚ್ಚರಿ.
ಬ್ಯಾಡ್ಮಿಂಟನ್ ಆಟಗಾರ್ತಿ:
2018ರಲ್ಲಿ, ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಪ್ರಶಸ್ತಿಯನ್ನು ಗೆದ್ದ ಹರ್ನಾಜ್ ಸಂಧು ಹಾಡು, ನೃತ್ಯ ಮತ್ತು ಓದುವುದೆಂದರೆ ಇಷ್ಟವಂತೆ. ತಮ್ಮ ತಾಯಿಯನ್ನೇ ರೋಲ್ ಮಾಡೆಲ್ ಆಗಿ ಪರಿಗಣಿಸಿಕೊಂಡಿರುವ ಈ ಸುಂದರಿ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಹೌದು.
ಇನ್ನು ಹರ್ನಾಜ್ ಕೌರ್ ಸಂಧು ಸಾಧಿಸಿದ ಯಶಸ್ಸಿಗೆ ಇಡೀ ದೇಶವೇ ಹೆಮ್ಮೆ ವ್ಯಕ್ತಪಡಿಸುತ್ತಿದೆ. ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಕೊಂಡ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಹರ್ನಾಜ್ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಭುವನ ಸುಂದರಿ ಪ್ರಶಸ್ತಿ ಗೆದ್ದ ಹರ್ನಾಜ್ ಕೌರ್ ಸಂಧು
ತೀರ್ಪುಗಾರರ ಮನ ಗೆದ್ದ ಹರ್ನಾಜ್ ಉತ್ತರ
ಟಾಪ್ 3ರ ಹಂತಕ್ಕೆ ತಲುಪಿದ ಮೂವರು ಸ್ಪರ್ಧೆಗಳನ್ನು ವೇದಿಕೆ ಮೇಲೆ ಬರಮಾಡಿಕೊಂಡ ತೀರ್ಪುಗಾರರು ಸರದಿಯಂತೆ ಒಬ್ಬೊಬ್ಬರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಬಂದರು. ಸಂಧು ಕಡೆ ಬೆರಳು ಮಾಡುತ್ತಾ 'ಒತ್ತಡವನ್ನು ಎದುರಿಸುತ್ತಿರುವ ಮಹಿಳೆಯರಿಗೆ ನೀವು ಯಾವ ಸಲಹೆಯನ್ನು ನೀಡಲು ಬಯಸುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಯಿತು.
ಇದಕ್ಕೆ ಕೂಲ್ ಆಗಿಯೇ ಉತ್ತರಿಸಿದ ಹರ್ನಾಜ್ ಸಂಧು, 'ನೀವು ಇನ್ನೊಬ್ಬರಿಗಿಂತ ವಿಭಿನ್ನರು ಎಂಬುವುದನ್ನು ಮೊದಲು ನಂಬಬೇಕು. ಇದುವೇ ನಿಮ್ಮನ್ನು ಸುಂದರ ಮತ್ತು ಇತರರಿಗಿಂತ ಭಿನ್ನವಾಗಿಸುತ್ತದೆ. ಆದ್ದರಿಂದ ನಿಮಗಾಗಿ ನೀವು ಮಾತನಾಡಲು ಕಲಿಯಿರಿ, ಈ ನಿರ್ಧಾರ ನಿಮ್ಮ ನಾಯಕರಾನ್ನಾಗಿ ಮಾಡುತ್ತದೆ' ಎಂದು ಹೇಳಿದ್ದಾರೆ.
ಭುವನ ಸುಂದರಿ ಪ್ರಶಸ್ತಿ ಗೆದ್ದ ಹರ್ನಾಜ್ ಕೌರ್ ಸಂಧು
ದೇಶದ ಮೂರನೇ ಮಗಳು:
ಸಂದು ಈ ಪ್ರಶಸ್ತಿ ಗದ್ದು ದೇಶದ ಮೂರನೇ ಮಗಳಾಗಿದ್ದಾಳೆ. ಬಾಲಿವುಡ್‌ನ ಖ್ಯಾತ ನಟಿ ಸುಶ್ಮಿತಾ ಸೇನ್ ಸುಶ್ಮಿತಾ ಸೇನ್ 1994 ರಲ್ಲಿ ಮತ್ತು ಲಾರಾ ದತ್ತಾ 2000 ರಲ್ಲಿ ಭುವನ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಇವರ ಬಳಿಕ ಸಂದು ಮಿಸ್ ಯುನಿವರ್ಸ್ ಕಿರೀಟ ಧರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಇನ್ನು ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಂದು 'ಲಿವಾ ಮಿಸ್ ದಿವಾ ಯೂನಿವರ್ಸ್ 2021' ಪ್ರಶಸ್ತಿ, ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ ಪ್ರಶಸ್ತಿ ಮತ್ತು ಫೆಮಿನಾ ಮಿಸ್ ಇಂಡಿಯಾ 2019 ಗ್ರ್ಯಾಂಡ್ ಫಿನಾಲೆಯನ್ನು ತಲುಪಿದ್ದು, ಅವರ ಸಾಧನೆಯಾಗಿದೆ.
ಭುವನ ಸುಂದರಿ ಪ್ರಶಸ್ತಿ ಗೆದ್ದ ಹರ್ನಾಜ್ ಕೌರ್ ಸಂಧು
ಇದನ್ನೂ ಓದಿ: ವಿದೇಶಿ ಬೆಡಗಿ ಕತ್ರಿನಾ ದೇಸಿ ಲುಕ್ಗೆ ಅಭಿಮಾನಿಗಳು ಪಿಧಾ: ಸಿಸ್ಟರ್ಸ್ ಜೊತೆ ಮಿಂಚಿದ ಕೈಫ್