ಕರ್ನಾಟಕ

karnataka

ETV Bharat / sitara

Watch.. ಗಾಯಕ ಮಿಕಾ ಸಿಂಗ್ ಅವರ ಹೊಸ ಹಾಡು 'ಮಜುನು' ಬಿಡುಗಡೆ - ಮಿಕಾ ಸಿಂಗ್ ಅವರ ಹೊಸ ಹಾಡು ಮಜುನು ಬಿಡುಗಡೆ

ಹೆಸರಾಂತ ಬಾಲಿವುಡ್ ಮತ್ತು ಪಂಜಾಬಿ ಗಾಯಕ ಮಿಕಾ ಸಿಂಗ್ ಅವರ ಹೊಸ ಹಾಡು 'ಮಜುನು' ಜ.5ರಂದು ಬಿಡುಗಡೆಯಾಗಿದೆ.

Mika Singh releases his new single 'Majnu'
ಮಿಕಾ ಸಿಂಗ್ ಅವರ ಹೊಸ ಹಾಡು 'ಮಜುನು' ಬಿಡುಗಡೆ

By

Published : Jan 7, 2022, 10:53 AM IST

ಮುಂಬೈ:ಪ್ರಸಿದ್ಧ ಬಾಲಿವುಡ್ ಮತ್ತು ಪಂಜಾಬಿ ಗಾಯಕ ಮಿಕಾ ಸಿಂಗ್ ಅವರು ತಮ್ಮ ಹೊಸ ಹಾಡು 'ಮಜುನು' ಜ.5ರಂದು ಬಿಡುಗಡೆಯಾಗಿದೆ. ಅಮೀರ್ ಅಲಿ ಮತ್ತು ಮಾಡೆಲ್, ನಟಿ ಅದಿತಿ ವತ್ಸ್ ನಟಿಸಿರುವ ರೊಮ್ಯಾಂಟಿಕ್ ಸಾಂಗ್​​ ಇದಾಗಿದೆ.

ಗಾಯಕ ಮಿಕಾ ಸಿಂಗ್ ಅವರ ಹೊಸ ಹಾಡು 'ಮಜುನು' ಬಿಡುಗಡೆ

ಸಹೋದರರಾದ ಶರೀಬ್ ಸಾಬ್ರಿ ಮತ್ತು ತೋಶಿ ಸಾಬ್ರಿ ಅವರು 'ರಾಜ್: ದಿ ಮಿಸ್ಟರಿ ಕಂಟಿನ್ಯೂಸ್' ಚಿತ್ರದ 'ಮಾಹಿ' ಹಿಟ್ ಹಾಡಿನಿಂದ ಜನಪ್ರಿಯರಾಗಿದ್ದಾರೆ. ಈ ಜೋಡಿ ಹಾಡಿಗೆ ಸಂಗೀತ ನೀಡಿದ್ದು, ವಿಡಿಯೋದಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಿಕಾ ಸಿಂಗ್, ವೀಡಿಯೊದಲ್ಲಿ ಅಮೀರ್ ಅಲಿ ಮತ್ತು ಅದಿತಿ ವತ್ಸ್ ಅದ್ಭುತವಾಗಿ ನಟಿಸಿದ್ದಾರೆ. 'ಎಫ್‌ಐಆರ್' ಮತ್ತು 'ಏಕ್ ಹಸೀನಾ ಥಿ' ಇತ್ಯಾದಿ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿರುವ ಅಮೀರ್ ಅವರು ತುಂಬಾ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುತ್ತಾರೆ ಎಂದಿದ್ದಾರೆ.

ಹಾಡಿನ ಬಗ್ಗೆ ಮಾತನಾಡುತ್ತಾ, ಇದು ಲವ್ ಸಾಂಗ್. ನೀವು ಪ್ರೀತಿಯಲ್ಲಿ ಬಿದ್ದಾಗ ನೀವು ಪಡೆಯುವ ಸುಂದರ ಅನುಭವಗಳನ್ನು ಒಳಗೊಂಡಿದೆ. ಮಜುನು ತನ್ನದೇ ಆದ ವೈಬ್ ಅನ್ನು ಹೊಂದಿದೆ. ಪ್ರೇಕ್ಷಕರು ಖಂಡಿತವಾಗಿ ಈ ಹಾಡನ್ನು ಕೇಳಲು ಇಷ್ಟಪಡುತ್ತಾರೆ ಎಂದಿದ್ದಾರೆ. ಈ ಹಾಡನ್ನು, ಜ.5 ರಂದು ವಿಶ್ವದಾದ್ಯಂತ 'ಮ್ಯೂಸಿಕ್ ಮತ್ತು ಸೌಂಡ್' ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಬಾಲಿವುಡ್ ನಟಿ ಸ್ವರಾ ಭಾಸ್ಕರ್​ಗೆ ಕೋವಿಡ್ ದೃಢ

ABOUT THE AUTHOR

...view details