ಕರ್ನಾಟಕ

karnataka

ETV Bharat / sitara

ಸುಶಾಂತ್​ರಂತೆ ನಾಳೆ ಗಾಯಕರೂ ಆತ್ಮಹತ್ಯೆ ಮಾಡಿಕೊಂಡರೆ ಅಚ್ಚರಿಯಿಲ್ಲ: ಸೋನು ನಿಗಂ - ಮ್ಯೂಸಿಕ್ ಮಾಫಿಯಾ

ಚಲನಚಿತ್ರೋದ್ಯಮಕ್ಕಿಂತ ಸಂಗೀತ ಉದ್ಯಮದಲ್ಲಿ ಹೆಚ್ಚು ಮಾಫಿಯಾ ಇದೆ ಎಂದು ಹೇಳುವ ಮೂಲಕ ಗಾಯಕ ಸೋನು ನಿಗಮ್​ ಆತಂಕಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಗಾಯಕ ಸೋನು ನಿಗಮ್
ಗಾಯಕ ಸೋನು ನಿಗಮ್

By

Published : Jun 19, 2020, 6:56 PM IST

Updated : Jun 19, 2020, 7:51 PM IST

ಮುಂಬೈ:ಹಲವಾರು ಹಿಟ್​​ ಹಾಡುಗಳನ್ನು ನೀಡಿರುವ ಗಾಯಕ ಸೋನು ನಿಗಮ್​​ ಅಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ ಸಂಗೀತ ಕ್ಷೇತ್ರದಲ್ಲಿರುವ ಮಾಫಿಯಾದ ಬಗ್ಗೆ ಸೋನು ಆತಂಕ ವ್ಯಕ್ತಪಡಿಸಿದ್ದಾರೆ.

"ಚಲನಚಿತ್ರೋದ್ಯಮಕ್ಕಿಂತ ಸಂಗೀತ ಉದ್ಯಮದಲ್ಲಿ ಹೆಚ್ಚು ಮಾಫಿಯಾ ಇದೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಸಹ ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯಬಹುದು" ಎಂದು ಸೋನು ನಿಗಮ್​ ಹೇಳಿದ್ದಾರೆ.

ಗಾಯಕ ಸೋನು ನಿಗಮ್​

"ಸಂಗೀತ ಉದ್ಯಮದಲ್ಲಿ ಕೇವಲ ಎರಡು ಕಂಪನಿಗಳು ಮಾತ್ರ ಶಕ್ತಿಯುತವಾಗಿವೆ, ಯಾರು ಹಾಡಬೇಕು, ಯಾರು ಹಾಡಬಾರದು ಎಂಬುದನ್ನು ಕಂಪನಿಗಳೇ ನಿರ್ಧರಿಸುತ್ತಿವೆ. "ಮ್ಯೂಸಿಕ್ ಮಾಫಿಯಾ" ಬಾಲಿವುಡ್‌ನ ಯುವ ಮತ್ತು ಮಹತ್ವಾಕಾಂಕ್ಷೆಯ ಗಾಯಕರು, ಗೀತರಚನೆಕಾರರು, ಸಂಯೋಜಕರ ವೃತ್ತಿಜೀವನವನ್ನು ನಾಶಪಡಿಸುತ್ತಿದೆ" ಎಂದರು.

ಇಂದು ಸುಶಾಂತ್‌ ಸಿಂಗ್ ರಜಪೂತ್‌ಗೆ ಆಗಿರುವುದು ನಾಳೆ ಸಂಗೀತ ನಿರ್ದೇಶಕರು, ಗಾಯಕರು, ಗೀತ ಸಾಹಿತಿಗಳು ಯಾರಿಗೆ ಬೇಕಾದರೂ ಆಗಬಹುದು. ನಾನು ತುಂಬ ಚಿಕ್ಕವಯಸ್ಸಿಗೆ ಇಂಡಸ್ಟ್ರೀಗೆ ಬಂದೆ. ನಾನು ಬಂದಾಗ ಇಂಥ ವಾತಾವರಣ ಇರಲಿಲ್ಲ. ನಾನು ಬಚಾವ್ ಆದೆ. ಆದರೆ, ಈಗಿನ ಹೊಸಬರಿಗೆ ಇಲ್ಲಿ ಬಹಳ ಕಷ್ಟ ಇದೆಲ್ಲ ಎಂದಿದ್ದಾರೆ.

"ನಿರ್ದೇಶಕರು ಮತ್ತು ನಿರ್ಮಾಪಕರು ಸಹ ಸಂತೋಷವಾಗಿಲ್ಲ ಏಕೆಂದರೆ ಅವರ ಆಯ್ಕೆಯ ಸಂಗೀತವನ್ನು ಮಾಡಲು ಅವರಿಗೆ ಅನುಮತಿ ಇಲ್ಲ. ಎಷ್ಟೋ ನಿರ್ದೇಶಕರು ನನ್ನ ಬಳಿ ಈ ಬಗ್ಗೆ ಹೇಳಿದ್ದಾರೆ. ನಮಗೆ ಇಷ್ಟವಿಲ್ಲದಿದ್ದರೂ, ಮ್ಯೂಸಿಕ್ ಕಂಪನಿಗೆ ಬೇಕು ಅನ್ನೋ ಕಾರಣಕ್ಕೆ ಕೆಲ ಹಾಡುಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ" ಎಂದು ಅವರು ಹೇಳಿದರು.

Last Updated : Jun 19, 2020, 7:51 PM IST

ABOUT THE AUTHOR

...view details