'ರಿಯಲ್ ಸ್ಟಾರ್' ಉಪೇಂದ್ರ ಅವರು ಟಾಲಿವುಡ್ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ತೆಲುಗಿನಲ್ಲೂ ಫೇಮಸ್ ಆಗಿರುವ ಉಪ್ಪಿ ಅವರ ಎಷ್ಟೋ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿವೆ. ಬರೀ ನಟನೆ ಮಾತ್ರವಲ್ಲದೇ, ತೆಲುಗಿನಲ್ಲೂ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಅವರು ಮತ್ತೊಮ್ಮೆ ತೆಲುಗು ನಟಿಸಿರುವ ‘ಘನಿ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
'ಗನಿ' ಚಿತ್ರದಲ್ಲಿ ಉಪೇಂದ್ರ :'ಗದ್ದಲಕೊಂಡ ಗಣೇಶ್' ಸಿನಿಮಾದ ನಂತರ ಕ್ರೀಡೆಯನ್ನು ಆಧರಿಸಿ ಟಾಲಿವುಡ್ ನಟ ವರುಣ್ ತೇಜ್ ‘ಘನಿ’ ಸಿನಿಮಾ ಮಾಡುತ್ತಿದ್ದಾರೆ. ವರುಣ್ ನಟನೆಯ 10ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಉಪೇಂದ್ರಗೆ ಒಂದು ಮಹತ್ವದ ರೋಲ್ ನೀಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಜಗಪತಿ ಬಾಬು ಕೂಡ ನಟಿಸಿದ್ದಾರೆ. ನಾಯಕಿಯಾಗಿ 'ದಬಂಗ್ 3' ಖ್ಯಾತಿಯ ಸಾಯಿ ಮಾಂಜ್ರೇಕರ್ ಬಣ್ಣ ಹಚ್ಚಿದ್ದಾರೆ.
ಓದಿ:ಬಸ್ - ಪ್ಯಾಸೆಂಜರ್ ವಾಹನದ ನಡುವೆ ಭೀಕರ ಅಪಘಾತ: ಮೂವರ ದುರ್ಮರಣ, ನಾಲ್ವರಿಗೆ ಗಾಯ
ಅಲ್ಲು ಅರ್ಜುನ್ ಸಹೋದರನ ಸಿನಿಮಾ :'ಘನಿ' ಸಿನಿಮಾಕ್ಕೆ ಹಣ ಹಾಕುತ್ತಿರುವುದು ಅಲ್ಲು ಅರ್ಜುನ್ ಸಹೋದರ ಅಲ್ಲು ಬಾಬಿ. ತಂದೆ ಅಲ್ಲು ಅರವಿಂದ್ ಈಗಾಗಲೇ ದೊಡ್ಡ ಬ್ಯಾನರ್‌ನ ಒಡೆಯರಾಗಿದ್ದರೂ, ಬಾಬಿ ಸ್ವಂತವಾಗಿ 'ಘನಿ'ಗೆ ಹಣ ಹಾಕುತ್ತಿದ್ದಾರೆ. ತಮ್ಮದೇ 'ಅಲ್ಲು ಬಾಬಿ ಕಂಪನಿ' ಮೂಲಕ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ನಿರ್ಮಾಣದಲ್ಲಿ ಅವರಿಗೆ ಸಿದ್ದು ಮುಧ ಸಾಥ್ ನೀಡಿದ್ದಾರೆ. ಥಮನ್ ಎಸ್. ಸಂಗೀತ ಸಂಯೋಜನೆ ಮಾಡಿದ್ದು, ಜಾರ್ಜ್ ವಿಲಿಯಮ್ಸ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ.
ಆರೇಳು ವರ್ಷಗಳ ನಂತರ ಟಾಲಿವುಡ್‌ಗೆ ಉಪೇಂದ್ರ :ವೃತ್ತಿ ಜೀವನದ ಆರಂಭದ ದಿನಗಳಲ್ಲೇ ಉಪೇಂದ್ರ ತೆಲುಗು ಸಿನಿಮಾಗಳನ್ನೂ ನಿರ್ದೇಶನ ಮಾಡಿದ್ದರು. 'ಓಂ' ಸಿನಿಮಾದ ತೆಲುಗು ರಿಮೇಕ್‌ಗೆ ಅವರೇ ಡೈರೆಕ್ಷನ್ ಮಾಡಿದ್ದರು. 2015ರಲ್ಲಿ ತೆರೆಕಂಡ ಅಲ್ಲು ಅರ್ಜುನ್ ಅಭಿನಯದ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದರು. ಅಲ್ಲಿ ಅವರಿಗೆ ಬಹಳ ಮಹತ್ವದ ಪಾತ್ರ ಸಿಕ್ಕಿತ್ತು. ಇತ್ತೀಚೆಗೆ ಬಂದ ಅವರ 'ಐ ಲವ್ ಯೂ' ಸಿನಿಮಾ ಕೂಡ ತೆಲುಗಿಗೂ ಡಬ್ ಆಗಿ ತೆರೆಕಂಡಿತ್ತು. ಇದೀಗ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಕೂಡ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಈಗ ಆರೇಳು ವರ್ಷಗಳ ನಂತರ ತೆಲುಗು ಸಿನಿಮಾದಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಏಪ್ರಿಲ್ 8 ರಂದು ತೆರೆಕಾಣಲಿದೆ.