ಮುಂಬೈ: ನಟ ಮನೋಜ್ ಬಾಜ್ಪಾಯಿ ತಮ್ಮ ನಟನೆಯ ಮರ್ಡರ್ ಮಿಸ್ಟರಿ ಸಿನಿಮಾ ‘ಸೈಲೆನ್ಸ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದೇ ಮಾರ್ಚ್ 26ರಂದು ಜಿ5 ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ಆ್ಯಪ್ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಪ್ರಾಚಿ ದೇಸಾಯಿ ಮತ್ತು ಅರ್ಜುನ್ ಮಾಥುರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊಲೆ ಥ್ರಿಲ್ಲಿಂಗ್ ಕಥೆ ನೋಡಲು ಸಿದ್ಧರಾಗಿ. ಇದು ಕೊನೆಯವರೆಗೂ ನಿಮಗೆ ಹುಡುಕಾಟ ನಡೆಸುವಂತೆ ಮಾಡುತ್ತದೆ. ಮಹಿಳೆಯೊಬ್ಬರ ಕೊಲೆಯ ಸುತ್ತ ನಡೆಯುವ ಸಿನಿಮಾ ಇದಾಗಿದೆ.