ಹೈದರಾಬಾದ್ (ತೆಲಂಗಾಣ):ಕೋವಿಡ್ ಪಾಸಿಟಿವ್ ಆಗಿರುವುದರಿಂದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಒಟ್ಟಿಗೆ ಇರದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರು ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಶುಭಾಶಯ ಕೋರಿಕೊಂಡಿದ್ದಾರೆ.
ಅರ್ಜುನ್ ಕಪೂರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಕೆಳಗೆ ಕುಳಿತು ಪೋಸ್ ನೀಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮಲೈಕಾ ಕೂಡ ತಮ್ಮ ಇನ್ಸ್ಟಾದಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ಶೀರ್ಷಿಕೆಯಲ್ಲಿ, "ಐ ಮಿ ಮಿಸ್ಟರ್ ಪೌಟಿ @ ಅರ್ಜುನ್ ಕಪೂರ್. ಹೊಸ ವರ್ಷದ ಶುಭಾಶಯಗಳು ಎಂದು ಬರೆದಿದ್ದಾರೆ.