ಧರ್ಮಶಾಲಾ: ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ರೂಮರ್ ಬಾಯ್ಫ್ರೆಂಡ್ ನಟ ಅರ್ಜುನ್ ಕಪೂರ್ಗಾಗಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಧರ್ಮಶಾಲಾದಲ್ಲಿ ಹಾರರ್ ಕಾಮಿಡಿ ಚಿತ್ರ ಭೂತ್ ಪೊಲೀಸ್ ಶೂಟಿಂಗ್ ನಡೆಯುತ್ತಿದೆ. ಕಳೆದೊಂದು ವಾರದ ಹಿಂದೆ ನಟಿ ಕರೀನಾ ಕಪೂರ್ ತನ್ನ ಮಗನೊಂದಿಗೆ ಹಿಮಾಚಲಪ್ರದೇಶಕ್ಕೆ ಭೇಟಿ ನೀಡಿ ಗಂಡ ಸೈಫ್ ಅಲಿ ಖಾನ್ ಜೊತೆ ದೀಪಾವಳಿ ಆಚರಿಸಿದ್ದರು.
ಕರೀನಾ ಕಪೂರ್, ತೈಮೂರ್ ಮತ್ತು ಸೈಫ್ ಅಲಿ ಖಾನ್ ಸುಂದರ ತಾಣವಾದ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಗಲ್ಲಿ-ಗಲ್ಲಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಪ್ರಸಿದ್ಧ ಕಾಫಿ ಶಾಪ್ಗೆ ಕರೀನಾ ಕಪೂರ್, ತೈಮೂರು ಮತ್ತು ಮಲೈಕಾ ಭೇಟಿ ನೀಡಿದ್ದರು. ಈ ವೇಳೆ ಮೂವರು ಕ್ಯಾಮೆರಾಗೆ ಫೋಸ್ ನೀಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟ ಮಲೈಕಾ ಆರೋರಾ, ಕರೀನಾ ಮತ್ತು ತೈಮೂರು ಜೊತೆ ಪರ್ವತದ ಆನಂದ ಪಡೆಯುತ್ತಿದ್ದೇನೆ ಎಂದು ಕ್ಯಾಪ್ಷನ್ ನೀಡಿದ್ದರು.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭೂತ್ ಪೊಲೀಸ್ ಚಿತ್ರೀಕರಣದಲ್ಲಿ ಅರ್ಜುನ್ ಕಪೂರ್, ಸೈಫ್ ಅಲಿ ಖಾನ್, ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಭಾಗಿಯಾಗಿದ್ದಾರೆ.