ಹೈದರಾಬಾದ್ :ಬಾಲಿವುಡ್ ನಟಿ ಮಲೈಕಾ ಆರೋರಾ ತನ್ನ ಮೂವರು ಆಪ್ತ ಸ್ನೇಹಿತೆಯರಾದ ಅನನ್ಯ ಪಾಂಡೆ, ಶನಯಾ ಕಪೂರ್ ಮತ್ತು ಸುಹಾನಾ ಖಾನ್ ಅವರ ಫೋಟೋಗಳನ್ನು ಸಾಮಾಜಿಕ ಜಾಲ ತಾಣ ಇನ್‌ಸ್ಟಾದಲ್ಲಿ ಷೇರ್ ಮಾಡಿದ್ದು, ಭಾರಿ ವೈರಲ್ ಆಗಿವೆ.
ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಮದುವೆ ನಿಮಿತ್ತ ನಿರ್ಮಾಪಕ ರಿತೇಶ್ ಸಿಧ್ವಾನಿ ಮುಂಬೈನ ಖಾರ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ವಿವಾಹದ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಯಂಗ್ ಲೇಡಿಸ್ ಹಾಗೂ ಹಿಂದಿ ಚಿತ್ರರಂಗದ ಹಲವು ಮಂದಿ ಭಾಗವಹಿಸಿದ್ದರು.
ಪಾರ್ಟಿಯಲ್ಲಿ ಅನನ್ಯ ಪಾಂಡೆ, ಶನಯಾ ಕಪೂರ್ ಹಾಗೂ ಸುಹಾನಾ ಖಾನ್ ಜೊತೆಗಿರುವ ಫೋಟೋಗಳನ್ನು ಮಲೈಕಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು
ಫರ್ಹಾನ್-ಶಿಬಾನಿ ಮದುವೆ ಪಾರ್ಟಿಯಲ್ಲಿ ತನ್ನ ಆಪ್ತ ಸ್ನೇಹಿತೆಯರ ಫೋಟೋ ಹಂಚಿಕೊಂಡ ಮಲೈಕಾ ನನ್ನ ಹುಡುಗಿಯರು ಎಂದ ಅನನ್ಯ ಪಾಂಡೆ
ಅನನ್ಯ ಪಾಂಡೆ, ಶನಯಾ ಕಪೂರ್ ಮತ್ತು ಸುಹಾನಾ ಖಾನ್ ಅವರ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡು Baby dolls all grown up (ಬೇಬಿ ಗೊಂಬೆಗಳು ಎಲ್ಲಾ ಬೆಳೆದವು) ಎಂದು ಬರೆದು ಕೆಂಪು ಹೃದಯದ ಎಮೋಜಿಯನ್ನು ಹಾಕಿದ್ದಾರೆ. ಇದೇ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿರುವ ಅನನ್ಯಾ, "ನನ್ನ ಹುಡುಗಿಯರು" ಎಂದು ಬರೆದಿದ್ದಾರೆ.
ದೀಪಿಕಾ ಪಡುಕೋಣೆ, ಅಮೀರ್ ಖಾನ್, ರಿಯಾ ಚಕ್ರವರ್ತಿ, ಶನಯಾ ಕಪೂರ್, ಸಂಜಯ್ ಕಪೂರ್, ತಾರಾ ಸುತಾರಿಯಾ, ಆಧಾರ್ ಜೈನ್, ವಿದ್ಯಾ ಬಾಲನ್, ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಸೇರಿ ನಟ, ನಟಿಯರು ಫರ್ಹಾನ್-ಶಿಬಾನಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಇವರೆಲ್ಲರ ಥೀಮ್ ಕಪ್ಪು ಆಗಿತ್ತು.
ಇದನ್ನೂ ಓದಿ:ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದ ಪೂರ್ವ ತಯಾರಿ ಫೋಟೋ ಹಂಚಿಕೊಂಡ ಅನುಷ್ಕಾ : ಜೂಲನ್ ಗೋಸ್ವಾಮಿ ಮೆಚ್ಚುಗೆ