ಕರ್ನಾಟಕ

karnataka

ETV Bharat / sitara

ಅರ್ಜುನ್​​-ಮಲೈಕಾ ಮ್ಯಾರೇಜ್​​... ಗಾಳಿ ಸುದ್ದಿಗೆ ನಟಿ ಬ್ರೇಕ್​ ಯತ್ನ - ನಿಕ್

ನಟ ಅರ್ಜುನ್ ಕಪೂರ್​​-ಮಲೈಕಾ ಅರೋರಾ ಮದುವೆ ರೂಮರ್​ ಬಹುದಿನಗಳಿಂದ ಕೇಳಿ ಬರುತ್ತಿದೆ. ಇದೀಗ ಈ ಗಾಳಿ ಸುದ್ದಿಗಳಿಗೆ ಮಲೈಕಾ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಚಿತ್ರಕೃಪೆ : ಇನ್​​ಸ್ಟಾಗ್ರಾಂ/ಟ್ವಿಟ್ಟರ್​

By

Published : Apr 15, 2019, 10:16 PM IST

ಕಳೆದ ವರ್ಷ ಬಾಲಿವುಡ್​ನ ಪ್ರೇಮಿಗಳೆಲ್ಲ ಮದುವೆಯಾಗಿ ಸೆಟ್ಲಾದ್ರು. ದೀಪಿಕಾ ಪಡುಕೋಣೆ-ರಣ್​ವೀರ್​ ಸಿಂಗ್​, ಪ್ರಿಯಾಂಕಾ ಚೋಪ್ರಾ-ನಿಕ್ ಸೇರಿದಂತೆ ಕೆಲ ಸೆಲಬ್ರಿಟಿ ಜೋಡಿಗಳು ತಮ್ಮ ಪ್ರೀತಿಯನ್ನು ಮದುವೆ ಹಂತಕ್ಕೆ ತೆಗೆದುಕೊಂಡು ಹೋದ್ರು.

2019 ಕೂಡ ಬಿಟೌನ್ ಪ್ರಣಯ ಪಕ್ಷಿಗಳಿಗೆ ಮದುವೆಯ ಆಮಂತ್ರಣ ನೀಡುತ್ತಿದೆ. ಈಗಾಗಲೇ ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಾಗಿದೆ. ಇನ್ನಷ್ಟೇ ಈ ಲವ್​ಬರ್ಡ್ಸ್​ ಸಪ್ತಪದಿ ತುಳಿಯಲಿದ್ದಾರೆ.

ಇತ್ತ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕೂಡ ಹಸೆಮಣೆ ಏರುವ ರೇಸ್​ನಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕೈ ಕೈ ಹಿಡಿದು ಡಿನ್ನರ್ ಪಾರ್ಟಿ​, ನೈಟ್​ ಔಟ್,​ ವಿದೇಶ ಸುತ್ತುತ್ತಿರುವ ಈ ಜೋಡಿ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ರೂಮರ್​ ದಟ್ಟವಾಗಿಯೇ ಹರಿದಾಡುತ್ತಿದೆ. ಇದೇ ತಿಂಗಳು 18 ಹಾಗೂ 22 ರಂದು ಗೋವಾದಲ್ಲಿ ಈ ಜೋಡಿಯ ಮದುವೆ ನಡೆಯಲಿದ ಎನ್ನುವ ಸುದ್ದಿ ಕೂಡ ಕೇಳಿ ಬಂದಿದೆ.

ಆದರೆ, ಈ ಎಲ್ಲ ಅಂತೆ-ಕಂತೆಗಳಿಗೆ ಮಲೈಕಾ ಅಂಕುಶ ಹಾಕುವ ಪ್ರಯತ್ನ ಮಾಡಿದ್ದಾರೆ. ಬಾಂಬೆ ಟೈಮ್ಸ್​ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಮಲೈಕಾ ಈ ಸಿಲ್ಲಿ ರೂಮರ್​ಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details