ಮುಂಬೈ:ಪ್ರಖ್ಯಾತಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮುಂಬೈನಲ್ಲಿ ದುಬಾರಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಮನೆಗೆ ಅವರು ಪ್ರತಿ ತಿಂಗಳು 12.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂರು ವರ್ಷಗಳಿಗೆ ಈ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದು ಈಗಾಗಲೇ 3 ಕೋಟಿ ರೂಪಾಯಿ ಠೇವಣಿ ಪಾವತಿಸಿದ್ದಾರೆ. ಅಕ್ಟೋಬರ್ 26, 2021 ರಂದು ಬಾಡಿಗೆ ಅಗ್ರಿಮೆಂಟ್ ನೋಂದಾಯಿಸಲಾಗಿದೆ.