ಬಾಲಿವುಡ್ ಧಕ್ ಧಕ್ ನಟಿ ಮಾಧುರಿ ದೀಕ್ಷಿತ್ ಫೈಂಡಿಂಗ್ ಅನಾಮಿಕಾ ಎಂಬ ವೆಬ್ ಸಿರೀಸ್ನಲ್ಲಿ ನಟಿಸುತ್ತಿದ್ದು, ಅದರಲ್ಲಿ ಅವರು ಅಭಿನಯಿಸಿರುವ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಫೈಂಡಿಂಗ್ ಅನಾಮಿಕಾ ಎಂಬ ಸೆನ್ಸೆಷನಲ್ ಡ್ರಾಮಾ ವೆಬ್ ಸರಣಿಯಲ್ಲಿ ಮಾಧುರಿ ದೀಕ್ಷಿತ್ ನಟಿಸುವ ಮೂಲಕ ಡಿಜಿಟಲ್ ಜಗತ್ತಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡುವ ಮೂಲಕ ತನ್ನ ಪಾತ್ರವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಫೈಂಡಿಂಗ್ ಅನಾಮಿಕಾ ಸಿರೀಸ್ ಮೂಲಕ ನಾನು ನೆಟ್ಫ್ಲಿಕ್ಸ್ನ ಒಂದು ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.