ನವದೆಹಲಿ :ಸತ್ಯ ಘಟನೆಗಳಿಂದ ಪ್ರೇರಿತ, ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಬಹು ನಿರೀಕ್ಷಿತ ಸಿನಿಮಾ 'ಇಂಡಿಯಾ ಲಾಕ್‌ಡೌನ್' ಶೂಟಿಂಗ್ ಇಂದಿನಿಂದ ಆರಂಭವಾಗಿದ್ದು, ಚಿತ್ರತಂಡ ಮುಹೂರ್ತ ನೆರವೇರಿಸಿದೆ.
ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ಟ್ರೇಡ್ ವಿಶ್ಲೇಷಕ ತರನ್ ಆದರ್ಶ್ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ, ಜೊತೆಗೆ ಸೆಟ್‌ನ ಕೆಲವು ಚಿತ್ರಗಳನ್ನು ಶೇರ್ ಮಾಡಿದ್ದಾರೆ.
"MADHUR BHANDARKAR STARTS SHOOT" (ಮಧುರ್ ಭಂಡಾರ್ಕರ್ ಸ್ಟಾರ್ಟ್ಸ್ ಶೂಟ್) ...# ಇಂಡಿಯಾ ಲಾಕ್‌ಡೌನ್ ಎಂದು ಟ್ವೀಟ್ ಮಾಡಿದ್ದು, ... ಚಿತ್ರೀಕರಣಕ್ಕೆ ಮುಂಚೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಮಧುರ್ ಜೊತೆಗೆ ನಿರ್ಮಾಪಕರಾದ ಪ್ರದೀಪ್ ಜೈನ್ ಮತ್ತು ಪ್ರಣವ್ ಜೈನ್ ಕೂಡ ಭಾಗವಹಿಸಿದ್ದಾರೆ.
ವರದಿಯ ಪ್ರಕಾರ, 'ಇಂಡಿಯಾ ಲಾಕ್‌ಡೌನ್' ಸಿನಿಮಾ ವಿಶ್ವಾದ್ಯಂತ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದಾಗ ಉಂಟಾದ ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ಪರಿಣಾಮಗಳ ಸುತ್ತಲೂ ಸುತ್ತುತ್ತದೆ. ಈ ಚಿತ್ರದಲ್ಲಿ ನಟರಾದ ಪ್ರತೀಕ್ ಬಬ್ಬರ್, ಸಾಯಿ ತಮ್ಹಂಕರ್ ಮತ್ತು 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ' ಖ್ಯಾತಿಯ ಅಹನಾ ಕುಮ್ರಾ ಕಾಣಿಸಿಕೊಳ್ಳಲಿದ್ದಾರೆ.
ಮಧುರ್ ಟ್ವಿಟರ್ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಮತ್ತು "ಚಿತ್ರದ ಶೂಟಿಂಗ್ ಪ್ರಾರಂಭ #ಇಂಡಿಯಾ ಲಾಕ್‌ಡೌನ್ @ಪ್ರತೀಕ್ ಬಬ್ಬರ್ @ಸಾಯಿ ತಮ್ಹಂಕರ್ @ಅಹನಕುಮ್ರಾ @ಶ್ವೇತಾ_ಅಫೀಶಿಯಲ್ @ಶಿಹಾಬ್ ಝರೀನ್ #ಪ್ರಕಾಶ್ಬೆಳವಾಡಿ @ ಪಿಜೆಮೋಷನ್ ಪಿಕ್ಚರ್ @ ಪ್ರಣವ್ಜೈನ್27 #ಇಂಡಿಯಾ ಲಾಕ್‌ಡೌನ್ ಈ ಎಲ್ಲ ಹ್ಯಾಂಡಲ್ಗಳನ್ನು ಟ್ಯಾಗ್ ಮಾಡಿದ್ದಾರೆ.
ಚಿತ್ರವನ್ನು ಪಿಜೆ ಮೋಷನ್ ಪಿಕ್ಚರ್ಸ್ ಮತ್ತು ಭಂಡಾರ್ಕರ್ ಎಂಟರ್‌ಟೈನ್‌ಮೆಂಟ್ ಸೇರಿ ನಿರ್ಮಾಣ ಮಾಡಲಿವೆ. 2020ರ ಡಿಸೆಂಬರ್‌ನಲ್ಲಿ ಈ ಚಿತ್ರ ನಿರ್ದೇಶಿಸುವುದಾಗಿ ಅಧಿಕೃತವಾಗಿ ಮಧುರ್ ಘೋಷಿಸಿದ್ದರು.
ಇದನ್ನೂ ಓದಿ:ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ರಿಲೀಸ್ ಡೇಟ್ ರಿವೀಲ್