ಕರ್ನಾಟಕ

karnataka

ETV Bharat / sitara

'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆ - 'ಮಾರ್ ಖಯೇಗಾ' ಹಾಡು ಗುರುವಾರ ಬಿಡುಗಡೆ

'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆಯಾಗಿದೆ. ಈ ಹಾಡನ್ನು ನೋಡಿ ಕೇಳಿದ ಮೇಲೆ ಇದನ್ನು ಅಲ್ಲಿ ಇಲ್ಲಿ ಕನೆಕ್ಟ್​ ಮಾಡಿರುವುದು ಕಂಡುಬರುತ್ತದೆ.

'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆ
'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆ

By

Published : Feb 24, 2022, 7:12 PM IST

ಹೈದರಾಬಾದ್:ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಗುರುವಾರ (ಫೆಬ್ರವರಿ 24) ಬಿಡುಗಡೆಯಾಗಿದೆ. ಹಾಡಿನಲ್ಲಿ ಅಕ್ಷಯ್ ಕುಮಾರ್ ಅವರ ಭಯಾನಕ ಅವತಾರವು ಅವರ ಅಭಿಮಾನಿಗಳಿಗೆ ಭಯ ಹುಟ್ಟಿಸುವುದಂತೂ ಸತ್ಯ. ಈ ಹಾಡನ್ನು ನೋಡಿ ಕೇಳಿದ ಮೇಲೆ ಇದನ್ನು ಅಲ್ಲಿ ಇಲ್ಲಿ ಕನೆಕ್ಟ್​ ಮಾಡಿ ಮಾಡಿರುವುದು ಕಂಡು ಬರುತ್ತದೆ.

'ಬಚ್ಚನ್ ಪಾಂಡೆ' ಸಿನಿಮಾದ ಮೊದಲ ಹಾಡು 'ಮಾರ್ ಖಯೇಗಾ' ಇಂದು ಬಿಡುಗಡೆ

'ಮಾರ್ ಖಯೇಗಾ' ಹಾಡನ್ನು ಗಾಯಕ ಫರ್ಹಾದ್ ಭಿವಂಡಿವಾಲಾ ಮತ್ತು ವಿಕ್ರಮ್ ಮಾಂಟ್ರೋಸ್ ಹಾಡಿದ್ದು, ಅವರೇ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಹಾಡಿನ ಸಾಹಿತ್ಯವನ್ನು ಫರ್ಹಾದ್ ಭಿವಂಡಿವಾಲಾ, ಅಜೀಂ ದಯಾನಿ ಮತ್ತು ವಿಕ್ರಮ್ ಮಾಂಟ್ರೋಸ್ ಬರೆದಿದ್ದಾರೆ. ಹಾಡಿನಲ್ಲಿರುವ ಸಂಭಾಷಣೆಗಳನ್ನು ಸಹ ಅಜೀಂ ದಯಾನಿ ಬರೆದಿದ್ದಾರೆ. ಟಿ-ಸೀರೀಸ್ ಲೇಬಲ್ ಅಡಿ ಚಿತ್ರದ ಸಂಗೀತ ಸಂಯೋಜಿಸಲಾಗಿದೆ.

ಇದನ್ನೂ ಓದಿ:'ಅಯೋಗ್ಯ' ಸಿನಿಮಾ ಹಾಡಿಗೆ 100 ಮಿಲಿಯನ್​ ಸಂಭ್ರಮ : ಆನಂದ್ ಆಡಿಯೋದಿಂದ ಸನ್ಮಾನ

ಅಕ್ಷಯ್ ಕುಮಾರ್ ಅವರ ಹೊಸ ಹಾಡು 'ಮಾರ್ ಖಯೇಗಾ'ದಲ್ಲಿನ ಅವರ ನೋಟ ಹೊರತುಪಡಿಸಿ, ಹೊಸದನ್ನು ನೋಡಲಾಗುವುದಿಲ್ಲ ಮತ್ತು ಕೇಳಲಾಗುವುದಿಲ್ಲ. ಈ ಹಾಡಿನಲ್ಲಿ ಅಕ್ಷಯ್ ಕುಮಾರ್ ತಮ್ಮ ಮೀಸೆ ಮತ್ತು ಹುಬ್ಬುಗಳನ್ನು ಪದೇ ಪದೆ ಹಾರಿಸುವುದನ್ನು ಕಾಣಬಹುದಾಗಿದೆ. ಇದು ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪಾ' ಸಿನಿಮಾದ ವೈರಲ್ ದೃಶ್ಯದೊಂದಿಗೆ ಎಲ್ಲೋ ಸಿಂಕ್ ಆಗಿದೆ ಎನ್ನಬಹುದು.

ಇದಲ್ಲದೇ ‘ಫೈರ್ ಹೂಂ ಮೈ ಜಲ್ ಜಾಯೇಗಾ’ ಹಾಡಿನ ಸಾಹಿತ್ಯವನ್ನು ಅಕ್ಷಯ್ ಬಾಯಿಂದ ಕೇಳಬಹುದಾಗಿದೆ. ಈ ಸಾಲು ಕೂಡ 'ಪುಷ್ಪ' ಸಿನಿಮಾದ ಡೈಲಾಗ್‌ನಿಂದ ಪ್ರೇರಿತವಾದಂತೆ ಕಾಣುತ್ತದೆ. ಇದೆ ವೇಳೆ, ಅಲ್ಲು ಅರ್ಜುನ್ ಅವರ ವಿಚಿತ್ರ ನೃತ್ಯದ ಒಂದು ನೋಟವು ಅಕ್ಷಯ್ ಅವರ ನೃತ್ಯದಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೇ ರಣವೀರ್ ಸಿಂಗ್ ಅಭಿನಯದ 'ಗಲ್ಲಿ ಬಾಯ್' ಸಿನಿಮಾದ 'ಅಪ್ನಾ ಟೈಮ್ ಆಯೇಗಾ' ಹಾಡನ್ನು ನೀವು ಕೇಳಿದ್ದರೆ, ನಿಮಗೆ ಇವೆರಡರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ‘ಮಾರ್ ಖಯೇಗಾ’ ಮತ್ತು ‘ಅಪ್ನಾ ಟೈಮ್ ಆಯೇಗಾ’ ಧ್ವನಿಯಲ್ಲಿ ಕೇವಲ 19-20 ವ್ಯತ್ಯಾಸವಿದೆ.

ABOUT THE AUTHOR

...view details