ಮುಂಬೈ:ನಟಿ ಮತ್ತು ಡ್ಯಾನ್ಸರ್ ಲಾರೆನ್ ಗಾಟ್ಲೀಬ್ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಸುಶಾಂತ್ ತಮ್ಮ "ಎವರೇಜ್ ಲುಕ್ ಮತ್ತು ಎವರೇಜ್ ಟ್ಯಾಲೆಂಟ್" ಮೂಲಕ ಬಾಲಿವುಡ್‌ನಲ್ಲಿ ಸ್ಥಾನ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದನ್ನು ಲಾರೆನ್ ಬಹಿರಂಗಪಡಿಸಿದ್ದಾರೆ.
"ಇಂದು ನಾನು ಸುಶಾಂತ್ ಅವರೊಂದಿಗಿನ ಒಂದು ವರ್ಷ ಹಿಂದಿನ ನನ್ನ ವಾಟ್ಸ್ಆ್ಯಪ್ ಸಂದೇಶಗಳನ್ನು ನೋಡಿದೆ. ಸಂಭಾಷಣೆಯನ್ನು ನೋಡಿ ನನ್ನ ಹೃದಯವು ದುಃಖದಿಂದ ತುಂಬಿದೆ. ಏಕೆಂದರೆ ಅದು ಪ್ರೀತಿ, ದಯೆ ಮತ್ತು ಪರಸ್ಪರರ ಕನಸುಗಳಿಗೆ ಬೆಂಬಲ ನೀಡಿತ್ತು" ಎಂದು ಲಾರೆನ್ ಸುಶಾಂತ್ನೊಂದಿಗಿನ ತನ್ನ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳೊಂದಿಗೆ ಬರೆದುಕೊಂಡಿದ್ದಾರೆ.