ಕರ್ನಾಟಕ

karnataka

ETV Bharat / sitara

ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ.. ಆದ್ರೂ ಐಸಿಯುನಲ್ಲೇ ಮುಂದುವರೆದ ಚಿಕಿತ್ಸೆ.. - ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ

ಲತಾ ದೀದಿ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಮನೆಗೆ ಮರಳಲು ಪ್ರಾರ್ಥಿಸೋಣ. ಅವರ ಆರೋಗ್ಯದ ಕುರಿತ ಸುಳ್ಳು ಸುದ್ದಿ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಲತಾ ಮಂಗೇಶ್ಕರ್​ರ ವಕ್ತಾರರು ಮನವಿ ಮಾಡಿದ್ದಾರೆ..

Lata Mangeshkar
ಲತಾ ಮಂಗೇಶ್ಕರ್

By

Published : Jan 22, 2022, 4:00 PM IST

ಮುಂಬೈ (ಮಹಾರಾಷ್ಟ್ರ) :ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರ ಆರೋಗ್ಯದಲ್ಲಿ ಸುಧಾರಣೆಯ ಲಕ್ಷಣಗಳು ಕಂಡು ಬರುತ್ತಿವೆ. ಐಸಿಯುನಲ್ಲೇ ಚಿಕಿತ್ಸೆ ಮುಂದುವರೆದಿದೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಇಂದು ತಿಳಿಸಿದ್ದಾರೆ.

ಜನವರಿ 9ರಂದು ಕೋವಿಡ್​ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್​ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಅವರ ಆರೋಗ್ಯದ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆಯ ಸಹ ಪ್ರಾಧ್ಯಾಪಕಿ ಡಾ. ಪ್ರತೀತ್ ಸಮ್ದಾನಿ, ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಿಸುತ್ತಿದೆ. ಆದರೆ, ಅವರು ಎಷ್ಟು ದಿನ ಆಸ್ಪತ್ರೆಯಲ್ಲಿರುತ್ತಾರೆ ಎಂದು ಹೇಳುವುದು ಕಷ್ಟ ಎಂದರು.

ಇದನ್ನೂ ಓದಿ:ಸೈಫ್​-ಅಮೃತಾ ಮಗನೊಂದಿಗೆ ಶ್ವೇತಾ ತಿವಾರಿ ಮಗಳು : ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಪಲಕ್

ಲತಾ ದೀದಿ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಮನೆಗೆ ಮರಳಲು ಪ್ರಾರ್ಥಿಸೋಣ. ಅವರ ಆರೋಗ್ಯದ ಕುರಿತ ಸುಳ್ಳು ಸುದ್ದಿ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಲತಾ ಮಂಗೇಶ್ಕರ್​ರ ವಕ್ತಾರರು ಮನವಿ ಮಾಡಿದ್ದಾರೆ.

'ಭಾರತದ ಮೆಲೋಡಿ ಕ್ವೀನ್' ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರಿಗೆ ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಅನೇಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details