ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದ ಅಂತಿಮ ಹಂತದ ಚಿತ್ರೀಕರಣ ಲಡಾಖ್ ಹಾಗೂ ಕಾರ್ಗಿಲ್ನಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಅಮೀರ್ ಖಾನ್ ಜೊತೆ ಯುದ್ಧದ ಚಿತ್ರೀಕರಣದಲ್ಲಿ ನಾಗ ಚೈತನ್ಯ - ಅಮೀರ್ ಖಾನ್
ಬಾಲಿವುಡ್ನ ಬಹು ನೀರಿಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾದ ಕೊನೆಯ ಹಂತದ ಚಿತ್ರೀಕರಣ ಲಡಾಖ್ ಹಾಗೂ ಕಾರ್ಗಿಲ್ನಲ್ಲಿ ನಡೆಯಲಿದ್ದು, ತೆಲುಗು ನಟ ನಾಗ ಚೈತನ್ಯ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಲಾಲ್ ಸಿಂಗ್ ಚಡ್ಡಾ ತಂಡವು ಹಿಮ ಕಡಿಮೆಯಾಗಲು ಕಾಯುತ್ತಿತ್ತು. ಇದರಿಂದಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಕಾರ್ಗಿಲ್ ಯುದ್ಧದ ದೃಶ್ಯಾವಳಿಯನ್ನು ಚಿತ್ರೀಕರಿಸಬಹುದು. ಈ ಸೀನ್ಗಳು ಚಿತ್ರದ ಕಥಾವಸ್ತುವಿಗೆ ಇದು ಹೆಚ್ಚಿನ ಮಹತ್ವದ್ದಾಗಿದೆ. ವರದಿಗಳ ಪ್ರಕಾರ, ಚಿತ್ರದ ಒಂದು ಟೀಮ್ ಕಾರ್ಗಿಲ್‌ನ ವಿವಿಧ ಸ್ಥಳಗಳನ್ನು ಲೊಕೇಶನ್ ಹುಡುಕುತ್ತಿದೆಯಂತೆ. ಸರಿಸುಮಾರು 45 ದಿನ ಇಲ್ಲಿ ಶೂಟಿಂಗ್ ನಡೆಯುವ ಸಾಧ್ಯತೆ ಇದೆಯಂತೆ.
ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ತೆಲುಗು ನಟ ನಾಗ ಚೈತನ್ಯ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದರಿಂದ ಅಕ್ಕಿನೇನಿ ಕುಟುಂಬದ ಮತ್ತೊಂದು ಕುಡಿ ಬಾಲಿವುಡ್ಗೆ ಎಂಟ್ರಿಯಾಗುತ್ತಿದೆ. ಈ ಚಿತ್ರವು ಟಾಮ್ ಹ್ಯಾಂಕ್ಸ್ ನಟಿಸಿದ 1994ರ ಹಾಲಿವುಡ್ ಹಿಟ್ ಫಾರೆಸ್ಟ್ ಗಂಪ್‌ನ ರಿಮೇಕ್ ಆಗಿದೆ. ಸ್ವತಃ ಅಮೀರ್ ನಟಿಸಿ ಚಿತ್ರವನ್ನು ನಿರ್ಮಿಸಿದ್ದಾರೆ. ಕರೀನಾ ಕಪೂರ್ ಖಾನ್ ಅಮೀರ್ ಜೊತೆ ಹೆಜ್ಜೆ ಹಾಕಿದ್ದಾರೆ. ಅದ್ವೈತ್ ಚಂದನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ವರ್ಷದ ಕ್ರಿಸ್‌ಮಸ್‌ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.