ಕರ್ನಾಟಕ

karnataka

ETV Bharat / sitara

ಕತ್ರಿನಾ ಕೈಫ್‌ -ವಿಕ್ಕಿ ಕೌಶಲ್ ಮದುವೆ ವಿಷಯ ಖಾತ್ರಿಪಡಿಸಿದ ಕೃಷ್ಣ ಅಭಿಷೇಕ್ - ಕಿರುತೆರೆ ಕಲಾವಿದ ಕೃಷ್ಣ ಅಭಿಷೇಕ್ ಮಾಹಿತಿ

'ದಿ ಕಪಿಲ್ ಶರ್ಮಾ' ಶೋನ ಹಾಸ್ಯನಟ ಕೃಷ್ಣ ಅಭಿಷೇಕ್ ಅವರು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ಎಲ್ಲ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಗುಟ್ಟಾಗಿ ಕತ್ರಿನಾ -ವಿಕ್ಕಿ ಮದುವೆಯ ಸಿದ್ಧತೆ ನಡೆಯುತ್ತಿದೆ ಎಂದು ಕೃಷ್ಣ ತಿಳಿಸಿದ್ದಾರೆ.

Katrina Vicky marriage
ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್

By

Published : Dec 3, 2021, 3:53 PM IST

ಹೈದರಾಬಾದ್:ಬಾಲಿವುಡ್‌ನ ನಟಿ ಕತ್ರಿನಾ ಕೈಫ್‌ ಮತ್ತು ನಟ ವಿಕ್ಕಿ ಕೌಶಲ್ ವಿವಾಹದ ಕುರಿತಂತೆ ಕಿರುತರೆ ಕಲಾವಿದ ಕೃಷ್ಣ ಅಭಿಷೇಕ್ ಖಚಿತಪಡಿಸಿದ್ದಾರೆ. ಇಂಡಿಯಾ ಟುಡೇ ಸುದ್ದಿ ಪ್ರಕಾರ, ದಿ ಕಪಿಲ್ ಶರ್ಮಾ ಕಾರ್ಯಕ್ರಮದ ಹಾಸ್ಯನಟ ಕೃಷ್ಣ ಅಭಿಷೇಕ್ ವಿಕ್ಕಿ ಕೌಶಲ್ ಆಪ್ತ ಸ್ನೇಹಿತ. ಕೆಲ ದಿನಗಳ ಹಿಂದೆ ಭಾಗಿಯಾಗಿದ್ದ ಸಂದರ್ಶವೊಂದರಲ್ಲಿ ವಿಕ್ಕಿ ಮತ್ತು ಕತ್ರಿನಾ ಮದುವೆಯ ಕುರಿತಂತೆ ಎಲ್ಲ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ.

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್

'ಹೌದು ತಾರಾ ಜೋಡಿ ವಿಕ್ಕಿ ಹಾಗೂ ಕತ್ರಿನಾ ಒಳಗೊಳಗೆ ಗುಟ್ಟಾಗಿ ಮದುವೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಕುರಿತಾಗಿ ಯಾವ ವಿಚಾರ ಬಹಿರಂಗಪಡಿಸಿಲ್ಲ. ವಿಕ್ಕಿ ಮತ್ತು ಕತ್ರಿನಾ ಇಬ್ಬರದ್ದು ಸುಂದರವಾದ ಜೋಡಿ, ಉತ್ತಮ ವ್ಯಕ್ತಿಗಳಾಗಿದ್ದಾರೆ' ಎಂದರು.

ವಿಕ್ಕಿ ಮತ್ತು ಕತ್ರಿನಾ ಮದುವೆಯನ್ನು ನೋಂದಾಯಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇದಾದ ನಂತರ ಡಿಸೆಂಬರ್.5 ರಂದು ಜೋಡಿ ರಾಜಸ್ಥಾನಕ್ಕೆ ತೆರಳಲಿದ್ದು, ಜೈಪುರವನ್ನು ತಲುಪಿದ ನಂತರ ಹೆಲಿಕ್ಯಾಪ್ಟರ್ ಮೂಲಕ ನೇರವಾಗಿ ಮದುವೆಯ ಸ್ಥಳವನ್ನು ತಲುಪಲಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ, ಡಿಸೆಂಬರ್ 7ರಂದು ರೆಸಾರ್ಟ್​​​ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಡಿಸೆಂಬರ್ .8 ರಂದು ಮೆಹಂದಿ ಕಾರ್ಯಕ್ರಮವಿದ್ದು, ಡಿಸೆಂಬರ್​​.09ವರೆಗೆ ಈ ತಾರಾ ಜೋಡಿಯ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

ಮದುವೆಗಾಗಿ ಸಕಲ ಸಿದ್ಧತೆ ನಡೆಯುತ್ತಿದ್ದರೂ ವಿಕ್ಕಿ ಮತ್ತು ಕತ್ರಿನಾ ಮಾತ್ರ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಸಿದ್ಧತೆಯಿಂದ ಅವರು ಹಸೆಮಣೆ ಏರುವುದು ಪಕ್ಕಾ ಎಂದು ಜಾಲತಾಣದಲ್ಲಿ ಸುದ್ದಿ ಜೋರಾಗಿದೆ.

ಇದನ್ನೂ ಓದಿ: 'ಸೆಕ್ಸ್‌ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್‌

ABOUT THE AUTHOR

...view details