ಮುಂಬೈ: ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ 19 ಜನ ಮೃತಪಟ್ಟು ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ನಟ ಅಕ್ಷಯ್ ಕುಮಾರ್, ಪ್ರೀತಿ ಜಿಂಟಾ, ಅಜಯ್ ದೇವಗನ್, ಇಶಾ ಗುಪ್ತಾ, ಮತ್ತು ಶ್ರದ್ಧಾ ಕಪೂರ್ ತಮ್ಮ ನೋವು ವ್ಯಕ್ತಪಡಿಸಿದ್ದು, ಪ್ರಾಣ ಕಳೆದುಕೊಂಡ ಪ್ರಯಾಣಿಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ದುರಂತ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ನಟ ಅಕ್ಷಯ್ ಕುಮಾರ್, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪೈಲಟ್ ನಿಧನದ ಬಗ್ಗೆ ಇಶಾ ಗುಪ್ತಾ ದುಃಖ ವ್ಯಕ್ತಪಡಿಸಿದರು ಮತ್ತು "ಸಿಪಿಟಿ ದೀಪಕ್ ವಸಂತ್ ಸಾಥೆ ಸರ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಪರ ಪ್ರಾರ್ಥಿಸುತ್ತೇನೆ ಮತ್ತು ಸಂತಾಪ ಸೂಚಿಸುತ್ತೇನೆ. ಅವರು ಕೇವಲ ಸಾಮಾನ್ಯ ತರಬೇತಿ ಪಡೆದ ಪೈಲಟ್ ಅಲ್ಲ, ಅವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ, ಎಂದು ಟ್ವೀಟ್ ಮಾಡಿದ್ದಾರೆ.