ಹೈದರಾಬಾದ್: ಜಾನ್ವಿ ಕಪೂರ್ ನಂತರ, ಕಪೂರ್ ಕುಟುಂಬದ ಇನ್ನೊಬ್ಬ ಹುಡುಗಿ ಸಿನಿರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ನಟ ಸಂಜಯ್ ಕಪೂರ್ ಅವರ ಪುತ್ರಿ ಶನಾಯ್ ಕಪೂರ್, ಕರಣ್ ಜೋಹರ್ ಅವರ ಬ್ಯಾನರ್ ಧರ್ಮ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗುವ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಜಗತ್ತಿಗೆ ಕಾಲಿಡಲು ಸಜ್ಜಾದ ಕಪೂರ್ ಕುಟುಂಬದ ಕುಡಿ ಶನಾಯ! - ಕರಣ್ ಜೋಹರ್
ನಟ ಸಂಜಯ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್, ಕರಣ್ ಜೋಹರ್ ಅವರ ಬ್ಯಾನರ್ ಧರ್ಮ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗುವ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶನಾಯ
ಈ ಬಗ್ಗೆ ಇಂದು ಬೆಳಗ್ಗೆ ಕರಣ್ ಅವರು ಸ್ಪಷ್ಟಪಡಿಸಿದ್ದಾರೆ. "ಶನಾಯ ಕಪೂರ್ಗೆ ಸ್ವಾಗತ. ಧರ್ಮ ಮೂವೀಸ್ ನಿರ್ಮಾಣದಡಿ ಜುಲೈನಲ್ಲಿ ಪ್ರಾರಂಭವಾಗುವ ನಿಮ್ಮ ಮೊದಲ ಚಿತ್ರ ಇದು" ಎಂದು ಕರಣ್, ಶನಾಯ ಫೋಟೋಗಳನ್ನು ಹಂಚಿಕೊಂಡು ಬರೆದಿದ್ದಾರೆ.
ಕರಣ್ ಬಾಲಿವುಡ್‌ಗೆ ಅನೇಕ ಹೊಸ ಮುಖಗಳನ್ನು ಪರಿಚಯಿಸಿದವರು. ಅವರಲ್ಲಿ ಕೆಲವರು ಆಲಿಯಾ ಭಟ್, ವರುಣ್ ಧವನ್, ಜಾನ್ವಿ ಕಪೂರ್. ಇದೀಗ ಶನಾಯಾ ಸರದಿ. ನಟಿಯಾಗಿ ಚಲನಚಿತ್ರ ಜಗತ್ತಿಗೆ ಪ್ರವೇಶಿಸುವ ಮೊದಲು, ಆಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾಳೆ.