ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ಶೂಟಿಂಗ್ ಮೊನ್ನೆಯಷ್ಟೇ ಮುಗಿದಿದೆ. ಇನ್ನು ಶೂಟಿಂಗ್ ಪ್ಯಾಕಪ್ ಮಾಡಿದ ದಿನ ವಿನೋದ್ ಖನ್ನಾ ಹುಟ್ಟುಹಬ್ಬವಾಗಿದ್ದು ಅಗಲಿದ ನಟನಿಗೆ ಸಲ್ಲುಭಾಯ್ ಶ್ರದ್ಧಾಂಜಲಿ ಕೂಡಾ ಅರ್ಪಿಸಿದ್ದಾರೆ. ಇದೀಗ ಚಿತ್ರತಂಡ ಕಿಚ್ಚ ಸುದೀಪ್ ಫಸ್ಟ್ಲುಕ್ ರಿವೀಲ್ ಮಾಡಿದೆ.
ದಬಾಂಗ್-3 ಕಿಚ್ಚ ಸುದೀಪ್ ಫಸ್ಟ್ಲುಕ್ ರಿವೀಲ್ ಮಾಡಿದ ಚುಲ್ಬುಲ್ ಪಾಂಡೆ.. ವಿಲನ್ ಪಾತ್ರದ ಹೆಸರೇನು? - ದಬಾಂಗ್-3 ಚಿತ್ರದ ಸುದೀಪ್ ಫಸ್ಟ್ಲುಕ್ ರಿವೀಲ್
ಸಲ್ಮಾನ್ ಖಾನ್, ಅರ್ಬಾಜ್ ಖಾನ್ ನಿರ್ಮಾನದ ದಬಾಂಗ್-3 ರ ಕಿಚ್ಚ ಸುದೀಪ್ ಫಸ್ಟ್ಲುಕ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ನಲ್ಲಿ ಸುದೀಪ್ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ.
ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆ ಹೆಸರನ್ನು ಚುಲ್ಬುಲ್ ಪಾಂಡೆ ಎಂದು ಬದಲಿಸಿಕೊಂಡಿದ್ದು ತಮ್ಮ ಟ್ವಿಟ್ಟರ್ನಲ್ಲಿ ಸುದೀಪ್ ಫಸ್ಟ್ಲುಕ್ ಪೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ. 'ಎದುರಾಳಿ ಎಷ್ಟು ಬಲಶಾಲಿಯಾಗಿರುತ್ತಾನೋ ಅವನೊಂದಿಗೆ ಹೋರಾಡಲು ಅಷ್ಟೇ ಮಜ ಇರುತ್ತದೆ..ದಬಾಂಗ್-3 ರಲ್ಲಿ 'ಬಲ್ಲಿ' ಪಾತ್ರ ಮಾಡಿರುವ ಕಿಚ್ಚ ಸುದೀಪ್ ಅವರನ್ನು ನಿಮಗೆ ಪರಿಚಯ ಮಾಡಿಸುತ್ತಿದ್ದೇನೆ ಎಂದು ಸಲ್ಮಾನ್ ಫೋಟೋ ಜೊತೆಗೆ ಕ್ಯಾಪ್ಷನ್ ನೀಡಿದ್ದಾರೆ. ಈ ಬಹುನಿರೀಕ್ಷಿತ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ದಬಾಂಗ್ ಹಾಗೂ ದಬಾಂಗ್-2 ರಲ್ಲಿ ಚುಲ್ಬುಲ್ ಪಾಂಡೆ ಆಗಿ ನಟಿಸಿದ್ದ ಸಲ್ಮಾನ್ ಇಲ್ಲೂ ಅದೇ ಪಾತ್ರ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಫಿಲಮ್ಸ್ ಹಾಗೂ ಅರ್ಬಾಜ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಡಿಸೆಂಬರ್ 20 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಸಲ್ಮಾನ್ ಹಾಗೂ ಸುದೀಪ್ ಇಬ್ಬರನ್ನೂ ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.