ಮುಂಬೈ (ಮಹಾರಾಷ್ಟ್ರ): ಖತ್ರೋನ್ ಕೆ ಖಿಲಾಡಿ ಸೀಸನ್ 11ರ ಸ್ಪರ್ಧಿ ಮತ್ತು ಬಾಲಿವುಡ್ ನಟಿ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಿಮೆ ರಕ್ತದ ಒತ್ತಡ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ಶ್ವೇತಾ ತಿವಾರಿ ಆಯಾಸ ಮತ್ತು ಕಡಿಮೆ ರಕ್ತದೊತ್ತಡದಿಂದಾಗಿ ಶ್ವೇತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚು ಪ್ರಯಾಣ ಮಾಡಿದ ಕಾರಣ ಮತ್ತು ವಿಶ್ರಾಂತಿ ಇರದ ಕಾರಣದಿಂದ ಅವರಿಗೆ ಸಹಜವಾಗಿ ಆಯಾಸವಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ. ಈಗಾಗಲೇ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎನ್ನಲಾಗಿದೆ.