ಕರ್ನಾಟಕ

karnataka

ETV Bharat / sitara

ಬಾಲಿವುಡ್​ ಬೆಡಗಿ ರವೀನಾ ಟಂಡನ್​ ಜನ್ಮದಿನಕ್ಕೆ ಗಿಫ್ಟ್​ ಕೊಟ್ಟ ಕೆಜಿಎಫ್-2‌ ಚಿತ್ರತಂಡ - KGF 2 team gift to Actress Raveena Tandon

ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಚಿತ್ರದ ನಾಯಕಿ ಬಾಲಿವುಡ್ ಬೆಡಗಿ ರವೀನಾ ಟಂಡನ್​ಗೆ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ.

ಬಾಲಿವುಡ್​ ಬೆಡಗಿ ರವೀನಾ ಟಂಡನ್​ ಜನ್ಮದಿನಕ್ಕೆ ಗಿಫ್ಟ್​ ಕೊಟ್ಟ ಕೆಜಿಎಫ್-2‌ ಚಿತ್ರತಂಡ
ಬಾಲಿವುಡ್​ ಬೆಡಗಿ ರವೀನಾ ಟಂಡನ್​ ಜನ್ಮದಿನಕ್ಕೆ ಗಿಫ್ಟ್​ ಕೊಟ್ಟ ಕೆಜಿಎಫ್-2‌ ಚಿತ್ರತಂಡ

By

Published : Oct 26, 2020, 1:17 PM IST

Updated : Oct 26, 2020, 1:56 PM IST

ಸದ್ಯ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2‌ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ಚಿತ್ರದ ನಾಯಕಿ, ಬಾಲಿವುಡ್ ಬೆಡಗಿ ರವೀನಾ ಟಂಡನ್​ಗೆ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ.

ಇಂದು ರವೀನಾ ಟಂಡನ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ರವೀನಾ ಟಂಡನ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ರವೀನಾ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಿದ್ದಾರೆ.

ರಾಜಕಾರಣಿ ಅವತಾರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದು, ಕೆಲ ದಿನಗಳ ಹಿಂದೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಪೋಸ್ಟರ್​ನ್ನು ಲಾಂಚ್ ಮಾಡಲಾಗಿತ್ತು. ಈಗಾಗಲೇ ರವೀನಾ ಟಂಡನ್ ಅವರ ಪಾತ್ರದ ಶೂಟಿಂಗ್ ಮುಗಿದಿದ್ದು, ಈಗ ಪೋಸ್ಟರ್​ ರಿಲೀಸ್ ಮಾಡಿದ್ದಾರೆ.

Last Updated : Oct 26, 2020, 1:56 PM IST

For All Latest Updates

ABOUT THE AUTHOR

...view details