ಮುಂಬೈ:ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅಭಿನಯದ ಚೊಚ್ಚಲ ಸಿನಿಮಾ ಕೇದಾರನಾಥ್ ಮೂರು ವರ್ಷಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ನಟಿ, ನಿರ್ದೇಶಕ ಅಭಿಷೇಕ್ ಕಪೂರ್ ಹಾಗೂ ಸಹನಟ ದಿವಂಗತ ಸುಶಾಂತ್ ಸಿಂಗ್ ಬಗೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ ಸಂಭವಿಸಿದ ನೈಸರ್ಗಿಕ ದುರಂತದ ಕುರಿತಾದ ಚಿತ್ರ ಇದಾಗಿದ್ದು, ಇದರಲ್ಲಿ ಹಿಂದೂ ಹುಡುಗಿ (ಸಾರಾ) ಮತ್ತು ಮುಸ್ಲಿಂ ಯುವಕನ (ಸುಶಾಂತ್) ಪ್ರೇಮಕಥೆ ಒಳಗೊಂಡಿದೆ. ಚಿತ್ರವನ್ನು ಅಭಿಷೇಕ್ ಮತ್ತು ಅವರ ಪತ್ನಿ ಪ್ರಜ್ಞಾ ಕಪೂರ್ ಆರ್ಎಸ್ವಿಪಿ ಮೂವೀಸ್‌ನ ರೋನಿ ಸ್ಕ್ರೂವಾಲಾ ನಿರ್ಮಿಸಿತ್ತು.
'ಕೇದಾರನಾಥ್ ನನ್ನ ಮೊದಲ ಸಿನಿಮಾ. ನನಗೆ ಇದು ಹೊಸ ಅನುಭವವಾಗಿತ್ತು. ಆ ಸಮಯದಲ್ಲಿ ತುಂಬಾನೆ ನರ್ವಸ್ ಆಗುತ್ತಿದೆ. ಆಗ ನಿರ್ದೇಶಕ ಅಭಿಷೇಕ್ ಮತ್ತು ಸುಶಾಂತ್ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಅದಕ್ಕೆ ನಾನು ಅಬಾರಿ' ಎಂದು ಧನ್ಯವಾದ ಅರ್ಪಿಸಿದ್ದಾರೆ.
ನಿರ್ದೇಶಕ ಅಭಿಷೇಕ್ ಮತ್ತು ಸುಶಾಂತ್ ನಾನು ಮಾಡಿದ ಕೆಲಸದಲ್ಲಿ ಸಮಾನ ಸ್ಥಾನ ಹೊಂದಿದ್ದಾರೆ. ಗಟ್ಟು ಸರ್ (ಅಭಿಷೇಕ್) ಅವರಿಂದ ನಾನು ಕ್ಯಾಮೆರಾವನ್ನು ಹೇಗೆ ಎದುರಿಸಬೇಕೆಂದು ಕಲಿತಿದ್ದೇನೆ. ಸುಶಾಂತ್ ಸಿನಿಮಾದ ಪ್ರತಿಯೊಂದು ಹೆಜ್ಜೆಯಲ್ಲೂ ಸಹಾಯ ಮಾಡಿದ್ದಾರೆ ಎಂದು ಹಳೆ ನೆನೆಪುಗಳನ್ನು ಬಿಚ್ಚಿಟ್ಟರು.
ನಾನು ಸಿಂಬಾ, ಲವ್ ಆಜ್ ಕಲ್ ಮತ್ತು ಕೂಲಿ ನಂ.1 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ನನ್ನ ಸಿನಿ ಪಯಣಕ್ಕೆ ನಾಂದಿ ಹಾಡಿದ ಮೊದಲ ಸಿನಿಮಾ ಕೇದಾರನಾಥ್. ತನ್ನ ಮೊದಲ ಚಿತ್ರ ಯಾವಾಗಲೂ ತನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಅನೇಕ ಕಾರಣಗಳಿಂದ ಚಿತ್ರ ನನಗೆ ವಿಶೇಷವಾಗಿದೆ. ನನ್ನ ಮೊದಲ ಶಾಟ್ ನನಗೆ ಈಗಲೂ ನೆನಪಿದೆ ಎಂದರು.
ಸದ್ಯ ಸಾರಾ ನಿರ್ಮಾಪಕ ಆನಂದ್. ಎಲ್ ರೈ ನಿರ್ದೇಶನ ಅತ್ರಂಗಿ ರೇ ಚಿತ್ರದಲ್ಲಿ ನಟಿಸಿದ್ದು, ನಟ ಅಕ್ಷಯ್ ಕುಮಾರ್ ಮತ್ತು ಧನುಷ್ ಒಳಗೊಂಡಿರುವ ಚಿತ್ರವು ಡಿಸೆಂಬರ್ .24 ರಂದು ಡಿಸ್ನಿ ಮತ್ತು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ಸಲ್ಮಾನ್ ಖಾನ್ 'ಟೈಗರ್ ಬಾಡಿಗಾರ್ಡ್' ಹೈ ಸೆಕ್ಯೂರಿಟಿ..!