ಕರ್ನಾಟಕ

karnataka

ETV Bharat / sitara

ಕತ್ರಿನಾ-ವಿಕ್ಕಿ ಕೌಶಲ್‌ ಕಲ್ಯಾಣ; ಚಿತ್ರ ನಿರ್ದೇಶಕ ಕಬೀರ್ ಖಾನ್ ಸೇರಿ ಗಣ್ಯರು ಜೈಪುರದತ್ತ ಪ್ರಯಾಣ - ಚಿತ್ರ ನಿರ್ದೇಶಕ ಕಬೀರ್ ಖಾನ್

2021ರ ಬಾಲಿವುಡ್‌ನ ರಾಯಲ್ ವೆಡ್ಡಿಂಗ್‌ ಎನಿಸಿರುವ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ವಿವಾಹದಲ್ಲಿ ಪಾಲ್ಗೊಳ್ಳಲು ಅತಿಥಿಗಳು ಮುಂಬೈನಿಂದ ಜೈಪುರದತ್ತ ಹೊರಟಿದ್ದಾರೆ. ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್‌ ಸೆನ್ಸಸ್​ ಹೋಟೆಲ್‌ನಲ್ಲಿ ಈ ಅದ್ಧೂರಿ ಮದುವೆ ನಡೆಯುತ್ತಿದೆ.

katvick wedding: guests-starts  going to jaipur airport
ಕತ್ರಿನಾ, ವಿಕ್ಕಿ ಕೌಶಲ್‌ ರಾಯಲ್‌ ಮದುವೆ; ಚಿತ್ರ ನಿರ್ದೇಶಕ ಕಬೀರ್ ಖಾನ್ ಸೇರಿ ಗಣ್ಯರು ಜೈಪುರದತ್ತ ಪ್ರಯಾಣ

By

Published : Dec 7, 2021, 4:53 PM IST

ಜೈಪುರ: ಬಾಲಿವುಡ್‌ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ವಿವಾಹ ನಾಡಿದ್ದು ಮಾಧೋಪುರದಲ್ಲಿ ಜರುಗಲಿದ್ದು, ಇಂದಿನಿಂದ ಕಾರ್ಯಕ್ರಮಗಳು ಆರಂಭವಾಗಿವೆ. ಇತ್ತ ಅತಿಥಿಗಳು ಮದುವೆಗಾಗಿ ಮುಂಬೈನಿಂದ ಜೈಪುರದತ್ತ ಹೊರಟಿದ್ದಾರೆ.

ಕಬೀರ್‌ ಖಾನ್‌, ಪತ್ನಿ ಮಿನಿ ಮಥುರ್‌ ಹಾಗೂ ಪುತ್ರಿ ಸೈರಾ ಜೈಪುರ್‌ದತ್ತ ಪ್ರಯಾಣ

ಚಿತ್ರ ನಿರ್ದೇಶಕ ಕಬೀರ್ ಖಾನ್, ನಟಿ ನೇಹಾ ಧೂಪಿಯಾ ಸೇರಿದಂತೆ ಹಲವು ಗಣ್ಯರು ಇಂದು ಬೆಳಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಕಬೀರ್‌ ಖಾನ್‌ ಪತ್ನಿ ಮಿನಿ ಮಥುರ್‌

ಅತಿಥಿಗಳು ರಸ್ತೆಯ ಮೂಲಕ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್‌ ಸೆನ್ಸಸ್​ ಹೋಟೆಲ್‌ನತ್ತ ತೆರಳುತ್ತಿದ್ದಾರೆ.

ನೇಹಾ ದೂಫಿಯಾ ದಂಪತಿ

ನಕ್ಷತ್ರಗಳ ಮಾದರಿಯಲ್ಲಿ ಅಲಂಕರಿಸಲ್ಪಟ್ಟ ಈ ರಾಯಲ್ ವೆಡ್ಡಿಂಗ್ ಅನ್ನು ತುಂಬಾ ಗೌಪ್ಯತೆಯಾಗಿ ನಡೆಸಲಾಗುತ್ತಿದ್ದು, ಎಲ್ಲೂ ಕೂಡ ಮದುವೆಯ ವಿಡಿಯೋಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗಣ್ಯರೂ ಕೂಡ ಇಲ್ಲಿ ಮೊಬೈಲ್‌ ಬಳಸಲು ನಿಷೇಧವಿದೆ.

ವಿಕ್ಕಿ-ಕತ್ರಿನಾ ಮದುವೆಗೆ ಹೋಗುತ್ತಿರುವ ಗಣ್ಯರು

ಇದನ್ನೂ ಓದಿ:Vicky-Katrina wedding : ನಿರ್ಬಂಧಗಳ ನಡುವೆಯೂ ವಿಡಿಯೋ ತುಣುಕು ಲೀಕ್​

ABOUT THE AUTHOR

...view details