ಜೈಪುರ(ರಾಜಸ್ತಾನ):ಬಾಲಿವುಡ್ ತಾರಾ ಜೋಡಿ ನಟಿ ಕತ್ರಿನಾ ಕೈಫ್ (Katrina kaif)ಮತ್ತು ನಟ ವಿಕ್ಕಿ ಕೌಶಲ್(Vikki koushal) ಅವರ ಮದುವೆ(Marriage) ರಾಜಸ್ಥಾನದ ಸವಾಯಿ ಮಧೋಪುರ ಜಿಲ್ಲೆಯ ಸಿಕ್ಸ್ ಸೆನ್ಸೆಸ್ ಪೋರ್ಟ್ ಹೋಟೆಲ್ನಲ್ಲಿ ಡಿಸೆಂಬರ್ನಲ್ಲಿ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ನಲ್ಲಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಮದುವೆ ನಿಗದಿ - ರಾಜಸ್ತಾನ
ವಿಕ್ಕಿ ಕೌಶಲ್(Vikki koushal) ಮತ್ತು ಕತ್ರಿನಾ ಕೈಫ್(Katrina kaif) ಮದುವೆ ಸಮಾರಂಭಕ್ಕಾಗಿ (Marriage ceremony) ಸಿಕ್ಸ್ ಸೆನ್ಸೆಸ್ ಪೋರ್ಟ್ ಹೋಟೆಲ್ ಅನ್ನು ಬುಕ್ ಮಾಡಲಾಗಿದ್ದು, ಡಿ.7ರಿಂದ 12 ರವರೆಗೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಹೊರ ಬೀಳಬೇಕಿದೆ.
![ಡಿಸೆಂಬರ್ನಲ್ಲಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಮದುವೆ ನಿಗದಿ katrina kaif vicky kaushal](https://etvbharatimages.akamaized.net/etvbharat/prod-images/768-512-13611137-thumbnail-3x2-marriage.jpg)
ಮದುವೆ ಸಮಾರಂಭಕ್ಕಾಗಿ ಸಿಕ್ಸ್ ಸೆನ್ಸೆಸ್ ಪೋರ್ಟ್ ಹೋಟೆಲ್ ಅನ್ನು ಬುಕ್ ಮಾಡಲಾಗಿದ್ದು, ಡಿ.7ರಿಂದ 12 ರವರೆಗೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಮಾತ್ರ ಹೊರಬೀಳಬೇಕಿದೆ.
ಇನ್ನೊಂದೆಡೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕುಟುಂಬಸ್ಥರು ಮದುವೆಗೆ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 10 ಜನರ ತಂಡವೊಂದು ಸಿಕ್ಸ್ ಸೆನ್ಸೆಸ್ ಹೋಟೆಲ್ಗೆ ತೆರಳಿದ್ದು, ಕೊಠಡಿಗಳ ಕಾಯ್ದಿರಿಸುವಿಕೆ ಮತ್ತು ಇನ್ನಿತರ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ತಾರಾ ಜೋಡಿ ಇತ್ತೀಚೆಗಷ್ಟೇ ತಮ್ಮ ಮನೆಯಲ್ಲಿ ವಧು-ವರ ಶಾಸ್ತ್ರವನ್ನು ಮುಗಿಸಿವೆ ಎಂಬ ಸುದ್ದಿ ಹೊರ ಬಿದ್ದಿದೆ.