ಕರ್ನಾಟಕ

karnataka

ETV Bharat / sitara

ವಿದೇಶಿ ಬೆಡಗಿ ಕತ್ರಿನಾ ದೇಸಿ ಲುಕ್​ಗೆ​ ಅಭಿಮಾನಿಗಳು ಪಿಧಾ: ಸಿಸ್ಟರ್ಸ್​​​​​​ ಜೊತೆ ಮಿಂಚಿದ ಕೈಫ್​ - ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಪೋಸ್ಟ್​ ಮಾಡಿದ ಕತ್ರಿನಾ

ಕತ್ರಿನಾ ಕೈಫ್ ಕೌಶಲ್ ‘ತಮ್ಮ ಇನ್​​ಸ್ಟಾಗ್ರಾಮಾದಲ್ಲಿ ತಮ್ಮ ಮದುವೆಯ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದು, ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕತ್ರಿನಾ ಫೋಟೋಸ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Katrina Kaif Shares New Photos Of Wedding
ಕತ್ರಿನಾ ಕೈಫ್​​ ವಿವಾಹ ಸಮಾರಂಭದ ಹೊಸ ಫೋಟೋಸ್​

By

Published : Dec 13, 2021, 5:04 PM IST

ಹೈದರಾಬಾದ್:ಬಾಲಿವುಡ್​ ತಾರಾ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಡಿಸೆಂಬರ್​ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ವಿವಾಹದ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕತ್ರಿನಾ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರೆಡ್​ ವೆಡ್ಡಿಂಗ್​ ಡ್ರೆಸ್​ನಲ್ಲಿ ಮಿಂಚಿದ ಕತ್ರಿನಾ

ವಿವಾಹ ಸಂಭ್ರಮದಲ್ಲಿರುವ ಕತ್ರಿನಾ - ವಿಕ್ಕಿ ದಂಪತಿ ನಿರಂತರವಾಗಿ ಮದುವೆ ಸಂಭ್ರಮದ ಕೆಲ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅರಿಶಿಣ ಶಾಸ್ತ್ರ, ಮೆಹಂದಿ, ವಿವಾಹ ಸಮಾರಂಭದ ಕೆಲ ಚಿತ್ರಗಳನ್ನು ನವಜೋಡಿ ಹಂಚಿಕೊಂಡಿತ್ತು. ಇದೀಗ ಕತ್ರಿನಾ ತಮ್ಮ ಸಹೋದರಿಯೊಂದಿಗಿನ ಮದುವೆಯ ಕೆಲ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಸಹೋದರಿಯರೊಂದಿಗೆ ಕತ್ರಿನಾ

'ನಾವು ಸಹೋದರಿಯರು ಬೆಳೆಯುತ್ತಾ ಹೋದಂತೆ ಯಾವಾಗಲೂ ಒಬ್ಬರಿಗೊಬ್ಬರು ರಕ್ಷಿಸಿಕೊಳ್ಳುತ್ತಾ ಹೋದೆವು. ಇವರು ನನ್ನ ಶಕ್ತಿಯ ಆಧಾರಸ್ತಂಭ. ನಾವು ಯಾವಾಗಲೂ ಆಕಾಶ, ಭೂಮಿಯಂತೆ ಒಟ್ಟಿಗೆ ಇರುತ್ತೇವೆ. ನಮ್ಮ ಸಂಬಂಧ ಯಾವಾಗಲೂ ಹೀಗೆಯೇ ಇರಬೇಕು' ಎಂದು ಫೋಟೋಗಳಿಗೆ ಭಾವನಾತ್ಮಕವಾಗಿ ಟಿಪ್ಪಣಿ ಬರೆದುಕೊಂಡಿದ್ದಾರೆ.

ಸಹೋದರಿಯರೊಂದಿಗೆ ಕತ್ರಿನಾ

ಫೋಟೋಗಳಲ್ಲಿ ರೆಡ್ ಡ್ರೆಸ್​​​ನಲ್ಲಿ ಕತ್ರಿನಾ ಕೈಫ್ ವೆಡ್ಡಿಂಗ್ ಲುಕ್​​ನಲ್ಲಿ ಅದ್ಭುತವಾಗಿ ಕಂಗೊಳಿಸುತ್ತಿದ್ದು, ಕತ್ರಿನಾ ಜೊತೆಗೆ ಅವರ ಸಹೋದರಿಯರು ಸಹ ಕಾಣಿಸಿಕೊಂಡಿದ್ದಾರೆ. ವಿದೇಶಿ ಬೆಡಗಿಯ ದೇಸಿ ಲುಕ್​ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸುಮಾರು 8 ಲಕ್ಷ 56 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ ನಟಿ ಸಮಂತಾಗೆ ಚಳಿಜ್ವರ.. ಆಸ್ಪತ್ರೆಯಲ್ಲಿ ಚಿಕಿತ್ಸೆ

ABOUT THE AUTHOR

...view details