ಹೈದರಾಬಾದ್,ತೆಲಂಗಾಣ :ಬಾಲಿವುಡ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಅದ್ಧೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದು, ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತನ್ನ ಅತ್ತೆಯೊಂದಿಗೆ ಹೋಳಿ ಆಚರಿಸಿದ ಕತ್ರಿನಾ ಕೈಫ್, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ವಿವಾಹವಾದ ನಂತರ ಕತ್ರಿನಾ ಮತ್ತು ವಿಕ್ಕಿ ದಂಪತಿಯ ಮೊದಲ ಹೋಳಿ ಹಬ್ಬ ಇದಾಗಿದೆ.
ಗುರುವಾರ ರಾತ್ರಿಯಷ್ಟೇ ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದ ಕತ್ರಿನಾ ಮತ್ತು ವಿಕ್ಕಿ ದಂಪತಿ ಈಗ ಕುಟುಂಬದೊಂದಿಗೆ ಹೋಳಿ ಆಚರಣೆ ಮಾಡಿದ್ದಾರೆ.