ಹೈದರಾಬಾದ್ (ತೆಲಂಗಾಣ) : ಸದ್ಯ ತಮ್ಮ ಹೊಸ ಐಷಾರಾಮಿ ಮನೆಗೆ ಶಿಫ್ಟ್ ಆಗಿರುವ ಬಾಲಿವುಡ್ನ ನೂತನ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಅಂದದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಬಳಿಕ ಇದೇ ಮೊದಲ ಬಾರಿಗೆ ಕತ್ರಿನಾ ಈ ಹೊಸ ಮನೆಗೆ ಆಗಮಿಸಿದ್ದಾರೆ. ಮನೆಯ ಫೋಟೋ ಜೊತೆಗೆ ಮಂಗಳಸೂತ್ರ ಕಾಣುವಂತೆ ತಮ್ಮ ಅಂದದ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನೆಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಹೆಚ್ಚು ಸುದ್ದಿಯಲ್ಲಿರುವ ಜೋಡಿಯಾಗಿದ್ದಾರೆ. ಏನೇ ಮಾಡಿದರೂ ಜಾಲತಾಣದಲ್ಲಿ ಈ ಜೋಡಿಯ ತರಹೇವಾರು ಫೋಟೋಗಳು ಆಗಾಗ ಓಡಾಡುತ್ತಿರುತ್ತವೆ.
ಸಬ್ಯಸಾಚಿಯವರ ಬೆಂಗಾಲ್ ಟೈಗರ್ ಸಂಗ್ರಹದಿಂದ ರಚಿಸಲಾಗಿರುವ ವಜ್ರದ ಹೊದಿಕೆಯ ಮಂಗಳಸೂತ್ರವನ್ನು ಧರಿಸಿದ್ದ ಕತ್ರಿನಾ, ಸೋಫಾದ ಮೇಲೆ ಕುಳಿತು ತಮ್ಮ ಅಂದದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೇಕಪ್ ಇಲ್ಲದ ಫೋಟೋ ಶೇರ್ ಮಾಡಿಕೊಂಡಿರುವ ಕತ್ರಿನಾ, ಅದಕ್ಕೆ ಹೃದಯದ ಎಮೋಜಿಯೊಂದಿಗೆ 'ಹೋಮ್ ಸ್ವೀಟ್ ಹೋಮ್' ಎಂದು ಅಂದದ ಶೀರ್ಷಿಕೆ ಸಹ ಹಾಕಿದ್ದಾರೆ.
ಫೋಟೋದಲ್ಲಿ ನಟಿ ಧರಿಸಿದ್ದ ಕಪ್ಪು ಮತ್ತು ಚಿನ್ನದ ಮಣಿಗಳಿಂದ ಅಲಂಕರಿಸಲ್ಪಟ್ಟ ವಜ್ರದ ಹೊದಿಕೆಯ ಮಂಗಳಸೂತ್ರ ಎಲ್ಲರ ಗಮನ ಸೆಳೆಯುವಂತಿದೆ. ಫೋಟೋ ನೋಡಿದ ಅಭಿಮಾನಿಗಳು 'ನೀವು ತುಂಬಾ ಸುಂದರವಾಗಿದ್ದೀರಿ ಮತ್ತು ನಿಮ್ಮ ಮಂಗಳಸೂತ್ರ ಅದ್ಭುತವಾಗಿದೆ' ಎಂದು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ನೂತನ ವರ್ಷ ಬರಮಾಡಿಕೊಂಡ ಬಳಿಕ ಎರಡು ದಿನಗಳ ಹಿಂದೆ ಕೆಲಸಕ್ಕೆ ಮರಳಿದ ಪತಿ ವಿಕ್ಕಿಯನ್ನು ಡ್ರಾಪ್ ಮಾಡಲು ಬಂದಿದ್ದ ಕತ್ರಿನಾ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಇನ್ನು ಇತ್ತೀಚೆಗೆ ಚಿತ್ರೀಕರಣದ ವೇಳೆ ನಟಿಸಾರಾ ಅಲಿ ಖಾನ್ಅವರನ್ನು ಕೂರಿಸಿಕೊಂಡ ವಿಕ್ಕಿ ಕೌಶಲ್ ಬೈಕ್ನಲ್ಲಿ ತೆರಳುತ್ತಿರುವ ಫೋಟೋವೊಂದು ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಹಲವು ಆಯಾಮಗಳ ಬಳಿಕ ಈ ಬಗ್ಗೆ ದೂರು ಸಹ ದಾಖಲಾಗಿತ್ತು.
ಇತ್ತೀಚೆಗೆ ದಂಪತಿ ಮೊದಲ ಬಾರಿಗೆ ಒಟ್ಟಿಗೆ ಕ್ರಿಸ್ಮಸ್ ಆಚರಿಸಿದ್ದಾರೆ. ಇಬ್ಬರು ತಬ್ಬಿಕೊಂಡಿರುವ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಇನ್ನು ಮದುವೆ ಬಳಿಕ ಮೊದಲ ಕ್ರಿಸ್ಮಸ್ ಆಚರಿಸಿಕೊಂಡ ಕತ್ರಿನಾ, ಅಂದೇ ಮೆರ್ರಿ ಕ್ರಿಸ್ಮಸ್ ಎಂಬ ತಮ್ಮ ಹೊಸ ಚಿತ್ರವನ್ನು ಘೋಷಿಸಿದರು.
ನಿರ್ದೇಶಕ ಶ್ರೀರಾಮ್ ರಾಘವನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆ ಕತ್ರಿನಾ ಕೈಫ್ ಹೆಜ್ಜೆ ಹಾಕಲಿದ್ದಾರೆ. ರಮೇಶ್ ತೌರಾನಿ ಮತ್ತು ಸಂಜಯ್ ರೌತ್ರೇ ನಿರ್ಮಿಸುತ್ತಿರುವ ಮೆರ್ರಿ ಕ್ರಿಸ್ಮಸ್ ಡಿಸೆಂಬರ್ 23, 2022ರಂದು ಕ್ರಿಸ್‌ಮಸ್ ವಾರಾಂತ್ಯಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ.
ಇದನ್ನೂ ಓದಿ:ಒಮಿಕ್ರಾನ್ ಭೀತಿ: ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಟಿ ಕಾಜೋಲ್ಗೆ ಟ್ರೋಲಿಗರ ಟಾಂಗ್..