ಮುಂಬೈ :ಕತ್ರಿನಾ ಕೈಫ್ ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ವಜ್ರಖಚಿತ ಮಾಂಗಲ್ಯ ಫೋಟೋವೊಂದು ನೆಟ್ಟಿಗರನ್ನು ಆಕರ್ಷಿಸುತ್ತಿದೆ.
ನಟಿ ಕತ್ರಿನಾ ಇನ್ಸ್ಟಾಗ್ರಾಮ್ನಲ್ಲಿ ಇತ್ತಿಚೇಗೆ ಮೂರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಕತ್ರಿನಾ ಚಳಿಗಾಲದ ಉಡುಗೆಗಳನ್ನ ಹಾಕಿಕೊಂಡಿದ್ದಾರೆ.
ನಗುತ್ತಲೇ ಕ್ಯಾಮೆರಾಗೆ ಫೋಸ್ ಕೊಟ್ಟಿರುವುದು ಕಾಣಬಹುದಾಗಿದೆ. ಇನ್ನು ಕತ್ರಿನಾ ಮತ್ತು ವಿಕ್ಕಿ ಕೌಶಾಲ್ ಸಮುದ್ರ ತೀರದ ಬಳಿಯಿರುವ ಹೊಸ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಈ ಸುಂದರ 'ಮಂಗಳಸೂತ್ರ' ಏಸ್ ಡಿಸೈನರ್ ಸಬ್ಯಸಾಚಿ ಮುಖರ್ಜಿಯವರ ಬೆಂಗಾಲ್ ಟೈಗರ್ ಸಂಗ್ರಹವಾಗಿದೆ. ಫೋಟೋ ನೋಡಿದ ಕತ್ರಿನಾ ಅವರ ಫಿಟ್ನೆಸ್ ತರಬೇತುದಾರ ಯಾಸ್ಮಿನ್ ಕರಾಚಿವಾಲಾ, ನಿಮ್ಮ ಹೊಸ ಮನೆ ನೋಡಲು ಕಾಯಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ ಹೋಟೆಲ್‌ನಲ್ಲಿ ಕೇವಲ 120 ಅತಿಥಿಗಳು ಹಾಜರಿದ್ದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಮೂರು ದಿನಗಳ ವಿವಾಹ ಮಹೋತ್ಸವವು ಡಿಸೆಂಬರ್ 7ರಿಂದ ಪ್ರಾರಂಭವಾಗಿತ್ತು.