ಹೊಸದಿಲ್ಲಿ :ಬಾಲಿವುಡ್ನ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯು ಟೈಗರ್-3 ಸಿನಿಮಾ ಮೂಲಕ ಮತ್ತೆ ಜೊತೆಯಾಗಿದ್ದು ಚಿತ್ರ ತಂಡ ಈಗ ರಷ್ಯಾದಲ್ಲಿ ಬೀಡು ಬಿಟ್ಟಿದೆ. ಚಿತ್ರೀಕರಣದ ಬಿಡುವಿನ ವೇಳೆ ನಟಿ ಕತ್ರಿನಾ ಕೈಫ್ ರಷ್ಯಾದ ಕೆಲ ಪ್ರಮುಖ ಬೀದಿಯಲ್ಲಿ ಸುತ್ತಾಡುತ್ತಾ ತಂಗಾಳಿಯ ಖುಷಿ ಸವಿದ್ದಾರೆ. ಇದನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿನ ತಂಪಾದ ವಾತಾವರಣದ ನಡುವೆ ಕತ್ರಿನಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮತ್ತೊಂದೆಡೆ ಹಸಿರು ಉದ್ಯಾನವನದಲ್ಲಿ ಲ್ಯಾವೆಂಡರ್ ಟೀ ಶರ್ಟ್ ಮತ್ತು ವರ್ಣರಂಜಿತ ಸ್ಕರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಎರಡಕ್ಕೂ ಆಕರ್ಷಕ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಚಿತ್ರದ ಬಗ್ಗೆ ಬಾಲಿವುಡ್ ಬಳಗ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ. ಸಲ್ಲು ವಿರುದ್ಧ ಕಾದಾಟಕ್ಕೆ ನಿಲ್ಲಲಿದ್ದಾರೆ. ಚಿತ್ರದಲ್ಲಿ ಇವರೂ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ ಎನ್ನಲಾಗುತ್ತಿದೆ.