ಅಭಿಮಾನಿಗಳಿಂದ ಪ್ರೀತಿಯಿಂದ 'ಕ್ಯಾಟ್' ಎಂದೇ ಕರೆಸಿಕೊಳ್ಳುವ ಕತ್ರೀನಾ ಕೈಫ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಬಾಲಿವುಡ್ ಮಂದಿ ಶುಭ ಕೋರಿದ್ದಾರೆ.
1983 ಜುಲೈ 16 ರಂದು ಕತ್ರೀನಾ ಹಾಂಕಾಂಗ್ನಲ್ಲಿ ಜನಿಸಿದರು. ತಂದೆ ಮೊಹಮ್ಮದ್ ಕೈಫ್ ಅಪ್ಪಟ ಕಾಶ್ಮೀರ ಮುಸಲ್ಮಾನರು. ತಾಯಿ ಸುಸಾನ್ ಬ್ರಿಟನ್ ಮೂಲದ ಕ್ರೈಸ್ತ ಕುಟುಂಬಕ್ಕೆ ಸೇರಿದವರು. ಕತ್ರೀನಾಗೆ ಮೂವರು ಅಕ್ಕಂದಿರು ಹಾಗೂ ಮೂವರು ತಂಗಿಯರಿದ್ದಾರೆ. ಕತ್ರೀನಾ ಚಿಕ್ಕವರಿರುವಾಗಲೇ ಅವರ ತಂದೆ-ತಾಯಿ ವಿಚ್ಚೇಧನ ಪಡೆದು ದೂರವಾದರು. ಅಂದಿನಿಂದ ತಾಯಿಯೊಂದಿಗೆ ಬಂದು ಇಂಗ್ಲೆಂಡ್ನಲ್ಲಿ ನೆಲೆಸಿದರು ಕತ್ರೀನಾ. ಮನೆಯಲ್ಲಿನ ಸಂಕಷ್ಟದ ಪರಿಸ್ಥಿತಿಯಿಂದ ಕಾಲೇಜು ಓದಲು ಆಗದ ಕತ್ರೀನಾ 14ನೇ ವಯಸ್ಸಿಗೆ ಮಾಡೆಲ್ ವೃತ್ತಿ ಆರಂಭಿಸಿದರು.