ಮುಂಬೈ: ಬಾಲಿವುಡ್ ಪಾಪರಾಜಿಗಳು ನಗರದಲ್ಲಿ ತಾರೆಗಳ ಫೋಟೋ ಸೆರೆ ಹಿಡಿಯುವುದರಲ್ಲಿ ನಿರತರಾಗಿದ್ದು, ಇದೀಗ ಒಂದಿಷ್ಟು ತಾರೆಯರು ಇವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.
ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಬಾಲಿವುಡ್ ಸ್ಟಾರ್ಸ್: Video - bollywood stars
ಬಾಲಿವುಡ್ ಸ್ಟಾರ್ಸ್ಗಳಾದ ಅರ್ಜುನ್ ಕಪೂರ್, ಫ್ರೆಡ್ಡಿ ದರುವಾಲ, ಕಾರ್ತಿಕ್ ಆರ್ಯನ್, ಜಾನ್ ಅಬ್ರಹಾಂ, ಜೆನೆಲಿಯಾ ದೇಶ್ಮುಖ್ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.
ಮುಂಬೈ ಏರ್ಪೋರ್ಟ್ನಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ. ಸಂದೀಪ್ ಔರ್ ಪಿಂಕಿ ಫರಾರ ಚಿತ್ರದ ನಟ ಅರ್ಜುನ್ ಕಪೂರ್ ಕ್ಯಾಸುವಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮುಂಬೈ ಏರ್ಪೋರ್ಟ್ನಲ್ಲಿ ಫ್ರೆಡ್ಡಿ ದರುವಾಲ ಕೂಡ ಕಾಣಿಸಿಕೊಂಡಿದ್ದಾರೆ.
ಮತ್ತೋರ್ವ ನಟ ಕಾರ್ತಿಕ್ ಆರ್ಯನ್ ಅಂಧೇರಿಯಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇವ್ರು 'ಭೂಲ್ ಭೂಲೈಯಾ 2' ಮತ್ತು 'ಧಮಾಕಾ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಜಾನ್ ಅಬ್ರಹಾಂ ಬಾಂದ್ರಾದಲ್ಲಿನ ಜಿಮ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಜೆನೆಲಿಯಾ ದೇಶ್ಮುಖ್ ಅವರು ಜಿಮ್‌ನ ಹೊರಗೆ ಕ್ಯಾಮರಾಗಳಿಗೆ ಪೋಸ್ ನೀಡಿದ್ರು.