ಶರಣ್ ಶರ್ಮಾ ನಿರ್ದೇಶನದ ಕರಣ್ ಜೋಹರ್ ಅವರ ಮುಂಬರುವ ಚಿತ್ರದಲ್ಲಿನ ಪಾತ್ರಗಳಲ್ಲಿ ಕಾರ್ತಿಕ್ ಆರ್ಯನ್ ಮತ್ತು ತೃಪ್ತಿ ದಿಮ್ರಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಗಳಿವೆ.
ಚಿತ್ರವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದ್ರೆ ಕಾರ್ತಿಕ್ ಆರ್ಯನ್ ಮತ್ತು ತೃಪ್ತಿ ದಿಮ್ರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಕೆಲವು ಟ್ಯಾಬ್ಲಾಯ್ಡ್‌ಗಳು ವರದಿ ಮಾಡಿವೆ.
ಇದನ್ನೂ ಓದಿ:ಬಾಲಿವುಡ್ ಬೆಡಗಿ ಆಲಿಯಾ ಭಟ್ ಕೋವಿಡ್ ವರದಿ ನೆಗೆಟಿವ್
ಆದ್ರೆ ಕರಣ್ ಜೋಹರ್, ಬಿತ್ರ ಇನ್ನೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಶರಣ್ ಶರ್ಮಾ ಅವರ ಮುಂದಿನ ಚಿತ್ರದ ಕುರಿತು ಸಾಕಷ್ಟು ಊಹಾಪೋಹಗಳಿವೆ. ಚಿತ್ರದ ಪಾತ್ರಧಾರಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತಗೆ ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದಿದ್ದಾರೆ.