ಕರ್ನಾಟಕ

karnataka

ETV Bharat / sitara

ನೆಟ್ ಫ್ಲಿಕ್ಸ್ ನಲ್ಲಿ 'ಧಮಾಕ' ಚಿತ್ರದ ಟ್ರೈಲರ್ ಬಿಡುಗಡೆ: ಪ್ರೇಕ್ಷಕರಿಂದ ಮೆಚ್ಚುಗೆ - ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಅವರ 'ಧಮಾಕ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ರಾಮ್ ಮಾಧ್ವನಿ ನಿರ್ದೇಶಿಸಿದ ಈ ಚಿತ್ರ ನವೆಂಬರ್ 19 ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.

Kartik Aaryan
ಕಾರ್ತಿಕ್ ಆರ್ಯನ್

By

Published : Oct 20, 2021, 8:02 PM IST

ಮುಂಬೈ (ಮಹಾರಾಷ್ಟ್ರ): ಕಾರ್ತಿಕ್ ಆರ್ಯನ್ ಅಭಿನಯದ ಧಮಾಕ ಚಿತ್ರದ ಟ್ರೈಲರ್ ಮಂಗಳವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನೆಟ್ ಫ್ಲಿಕ್ಸ್ ನಲ್ಲಿ 'ಧಮಾಕ' ಚಿತ್ರದ ಟ್ರೈಲರ್ ಬಿಡುಗಡೆ

ಧಮಾಕ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾರ್ತಿಕ್ ಆರ್ಯನ್, ದಾಖಲೆಯ 10 ದಿನಗಳಲ್ಲಿ ಕೊರೊನಾ ವೈರಸ್ ಹರಡಿರುವ ಸಮಯದಲ್ಲಿ ಚಲನಚಿತ್ರವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಧಮಾಕಾ' ಟ್ರೈಲರ್​ನಲ್ಲಿ ಬಿರುಸಿನ ನಟನೆಯೊಂದಿಗೆ ಮಿಂಚಿದ ನಟ ಕಾರ್ತಿಕ್‌ ಆರ್ಯನ್​..

ಧಮಾಕ ಚಲನಚಿತ್ರವು ಒಂದು ಸುದ್ದಿ ವಾಹಿನಿಯ ಕಾರ್ಯವೈಖರಿಯನ್ನು ಆಧರಿಸಿದ ಚಿತ್ರ. ಕಾರ್ತಿಕ್ ಆರ್ಯನ್ ಪ್ರೈಮ್ ಟೈಮ್ ಸುದ್ದಿ ನಿರೂಪಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಮಾಧ್ವನಿ ನಿರ್ದೇಶಿಸಿದ ಈ ಚಿತ್ರ ನವೆಂಬರ್ 19 ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಚಿತ್ರದ ನಿರ್ಮಾಣವನ್ನು ವಿಶ್ವದ ಪ್ರಸಿದ್ಧ ಕಂಪನಿಗಳಾದ ಆರ್‌ಎಸ್‌ವಿಪಿ ಮೂವೀಸ್, ರಾಮ್ ಮಾಧ್ವನಿ ಫಿಲ್ಮ್ಸ್, ಲೊಟ್ಟೆ ಎಂಟರ್‌ಟೈನ್‌ಮೆಂಟ್ ಮತ್ತು ಗ್ಲೋಬಲ್ ಗೇಟ್ ಎಂಟರ್‌ಟೈನ್‌ಮೆಂಟ್ ಮಾಡುತ್ತಿವೆ.

ABOUT THE AUTHOR

...view details