ಕರ್ನಾಟಕ

karnataka

ETV Bharat / sitara

ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯದ 'ಶೆಹಜಾದ್​'​​​ ಸಿನಿಮಾದ ಶೂಟಿಂಗ್​ ಆರಂಭ - ನಿರ್ದೇಶಕ ರೋಹಿತ್ ಧವನ್ ಮುಂದಿನ ಸಿನಿಮಾ ಶೆಹಜಾದ್​​​​

ಬಾಲಿವುಡ್​​ ನಟ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೊನ್ ಅಭಿನಯದ ಶೆಹಜಾದ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಚಿತ್ರೀಕರಣ ನಡೆಯಲಿದೆ. ಈ ಕುರಿತಂತೆ ಚಿತ್ರತಂಡ ಮಾಹಿತಿ ನೀಡಿದೆ.

Kartik Aaryan, Kriti Sanon
ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್

By

Published : Oct 13, 2021, 5:07 PM IST

ಮುಂಬೈ:ನಿರ್ದೇಶಕ ರೋಹಿತ್ ಧವನ್​​ರವರ ಮುಂಬರುವ ಶೆಹಜಾದ್​ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಭೂಷಣ್ ಕುಮಾರ್, ಅಲ್ಲು ಅರವಿಂದ್ ಮತ್ತು ಅಮನ್ ಗಿಲ್ ನಿರ್ಮಿಸುತ್ತಿರುವ ಈ ಚಿತ್ರ ನವೆಂಬರ್​ 04, 2022 ರಂದು ಬಿಡುಗಡೆಯಾಗಲಿದೆ. ಧವನ್ ನಿರ್ದೇಶನದ ಡಿಶೂಂ ಮತ್ತು ದೇಸಿ ಬಾಯ್ಸ್ ಚಿತ್ರಗಳಿಗೆ ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದರು. ಇದೀಗ ಈ ಚಿತ್ರಕ್ಕೂ ಅವರೇ ಕೆಲಸ ಮಾಡಲಿದ್ದಾರೆ.

ಶೆಹಜಾದ್ ಚಿತ್ರತಂಡ

ಭೂಷಣ್ ಕುಮಾರ್ ಅವರು ಬಹಳ ದಿನಗಳಿಂದ ಬಿಗ್​ ಬಜೆಟ್​ ಸಿನಿಮಾವನ್ನು ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು. ಇದೀಗ ಶೆಹಜಾದ್​​​​ ಸಿನಿಮಾಕ್ಕಾಗಿ ಎಲ್ಲಾ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದು ಆ್ಯಕ್ಷನ್ ಹಾಗೂ ಕೌಟುಂಬಿಕ ಚಿತ್ರವಾಗಿದ್ದು, ಸಿನಿಮಾದ ಚಿತ್ರೀಕರಣ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿದೆ.

ಸಿನಿಮಾದಲ್ಲಿ ಪರೇಶ್ ರಾವಲ್, ಮನಿಷಾ ಕೊಯಿರಾಲ, ರೋನಿತ್ ರಾಯ್ ಮತ್ತು ಸಚಿನ್ ಖೇಡೇಕರ್ ಕೂಡ ನಟಿಸುತ್ತಿದ್ದಾರೆ.

ನಟ ಕಾರ್ತಿಕ್ ಆರ್ಯನ್ ಮುಂದೆ ಧಮಾಕಾ, ಭೂಲ್ ಭೂಲೈಯಾ-2 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಸನೋನ್​​ ಹಮ್ ದೋ ಹಮಾರೆ ದೊ, ಬಚ್ಚನ್ ಪಾಂಡೆ, ಭೇಡಿಯಾ ಮತ್ತು ಆದಿಪುರುಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನನಗೆ ಪತ್ನಿ ದೀಪಿಕಾ ಹೊಡೆಯುತ್ತಾಳೆ ಎಂದು 'ಶತಮಾನದ ಗಂಡ' ಎನಿಸಿಕೊಂಡಿರುವ ರಣವೀರ್​ ಹೇಳಿದ್ಯಾಕೆ?

ABOUT THE AUTHOR

...view details