ಮುಂಬೈ:ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕರೀನಾಳ ಸೋದರಸಂಬಂಧಿ, ನಟ ರಣಬೀರ್ ಕಪೂರ್ ಸಹೋದರಿಯೂ ಆಗಿರುವ ರಿಧಿಮಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ವಿಚಾರವನ್ನ ಹಂಚಿಕೊಂಡು ಬೆಬೊ ಮತ್ತು ಸೈಫ್ಗೆ ವಿಶ್ ಮಾಡಿದ್ದಾರೆ.