ಕರ್ನಾಟಕ

karnataka

ETV Bharat / sitara

ಮಗನ ಫೋಟೋ ಶೇರ್​ ಮಾಡಿ 'ತಾಯಂದಿರ ದಿನ'ಕ್ಕೆ ಶುಭ ಕೋರಿದ ಕರೀನಾ! - ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್ ಮಗು ಫೋಟೋ ವೈರಲ್​

ವಿಶ್ವ ತಾಯಂದಿರ ದಿನದ ಸಂದರ್ಭದಲ್ಲಿ ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್ ತಮ್ಮ ಕಿರಿಯ ಮಗನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದಾರೆ..

Kareena Kapoor shares younger son's first pic on Mother's Day
'ತಾಯಂದಿರ ದಿನ'ಕ್ಕೆ ಶುಭಾಷಯ ಕೋರಿದ ನಟಿ ಕರಿನಾ

By

Published : May 9, 2021, 4:03 PM IST

ಹೈದರಾಬಾದ್ ​: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್​ ಅವರು ತಾಯಂದಿರ ದಿನದ ಪ್ರಯುಕ್ತ ತಮ್ಮ ಕಿರಿಯ ಮಗನ ಮುದ್ದಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ.

ಇನ್ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಹಿರಿಯ ಮಗ ತೈಮೂರ್ ಅಲಿ ಖಾನ್ ಮಗುವನ್ನು ಅಪ್ಪಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ನಟಿ, ವಿಶ್ವ ತಾಯಂದಿರ ದಿನದಂದು ವಿಶೇಷ ಕ್ಯಾಷ್ಶನ್​ ಕೊಡುವ ಮೂಲಕ ಅಭಿಮಾನಿಗಳಿಗೆ ಸಂತೋಷವನ್ನು ಹಂಚಿದ್ದಾರೆ.

ಇಂದು ಇಡೀ ಜಗತ್ತು ಭರವಸೆಯ ಮೇಲೆ ನಿಂತಿದೆ. ಈ ಸಮಯದಲ್ಲಿ ನಾಳೆಯ ದಿನಗಳಿಗೆ ಇವರಿಬ್ಬರು ನನಗೆ ಭರವಸೆಯನ್ನು ನೀಡಿದ್ದಾರೆ. ಹೊರಗಿರುವ ಎಲ್ಲ ಸುಂದರ ಹಾಗೂ ಗಟ್ಟಿಗಿತ್ತಿ ತಾಯಂದರಿಗೆ ತಾಯಂದಿರ ದಿನದ ಶುಭಾಶಯ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಟಿ ಕರೀನಾಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವರ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಸೈಫ್, "ನಾವು ಗಂಡು ಮಗುವನ್ನು ಪಡೆದಿದ್ದೇವೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಆರೋಗ್ಯವಾಗಿದ್ದಾರೆ. ನಮ್ಮ ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

ABOUT THE AUTHOR

...view details