ಕರ್ನಾಟಕ

karnataka

ETV Bharat / sitara

ರಿಯಾ ಕಪೂರ್ ಜೊತೆ ಆಹಾರದ ಬಗ್ಗೆ ಚರ್ಚೆ: ವಾಟ್ಸಾಪ್ ಚಾಟ್​ ಶೇರ್‌ ಮಾಡಿದ ಕರೀನಾ - Kareena Kapoor recent Whatsapp conversation

ಕರೀನಾ ಕಪೂರ್ ಅವರ ಸ್ನೇಹಿತೆ ಮತ್ತು ನಿರ್ಮಾಪಕಿ ರಿಯಾ ಕಪೂರ್ ಅವರ ಇತ್ತೀಚಿನ ವಾಟ್ಸಾಪ್ ಸಂಭಾಷಣೆ ವೈರಲ್​ ಆಗಿದೆ.

ರಿಯಾ ಕಪೂರ್  ಜೊತೆ ಆಹಾರದ ಬಗ್ಗೆ ಚರ್ಚೆ : ವಾಟ್ಸಾಪ್ ಚಾಟ್​ ಸ್ಕ್ರೀನ್​ ಶಾಟ್​ ಹಂಚಿಕೊಂಡ ಕರೀನಾ ಕಪೂರ್
ರಿಯಾ ಕಪೂರ್ ಜೊತೆ ಆಹಾರದ ಬಗ್ಗೆ ಚರ್ಚೆ : ವಾಟ್ಸಾಪ್ ಚಾಟ್​ ಸ್ಕ್ರೀನ್​ ಶಾಟ್​ ಹಂಚಿಕೊಂಡ ಕರೀನಾ ಕಪೂರ್

By

Published : Jan 7, 2022, 8:27 PM IST

ಮುಂಬೈ: ಶುಚಿ-ರುಚಿಯಾದ ತಿನಿಸು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?. ಹಾಗಾಗಿ, ಲಂಚ್​ ಅಥವಾ ಡಿನ್ನರ್​ ಪಾರ್ಟಿಗಳು ಪ್ರೀತಿಪಾತ್ರರನ್ನು ಒಂದುಗೂಡಿಸಿ ಸುಂದರ ಸಮಯ ಅನುಭವಿಸುವಂತೆ ಮಾಡುತ್ತವೆ. ಅಂತೆಯೇ ಖ್ಯಾತ ಸಿನಿಮಾ ತಾರೆಯರಾದ ಕರೀನಾ ಕಪೂರ್ - ರಿಯಾ ಕಪೂರ್ ಈ ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಕರೀನಾ ಕಪೂರ್ ಅವರ ಸ್ನೇಹಿತೆ ಮತ್ತು ನಿರ್ಮಾಪಕಿ ರಿಯಾ ಕಪೂರ್ ಅವರ ಇತ್ತೀಚಿನ ವಾಟ್ಸಾಪ್ ಸಂಭಾಷಣೆ ವೈರಲ್​ ಆಗಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚೆಚ್ಚು ಪ್ರತಿಕ್ರಿಯೆಗಳು ಬರುತ್ತಿವೆ.

ಬಾಲಿವುಡ್ ಬೆಬೊ ಕರೀನಾ ಕಪೂರ್ ಅವರು ರಿಯಾ ಅವರೊಂದಿಗಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ ಶಾಟ್ ಅ​​ನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಸಿಹಿತಿಂಡಿಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಈ ಸಂಭಾಷಣೆಯಲ್ಲಿ, ರಿಯಾ ಅವರು ಕರೀನಾಗೆ ನೀವು ಏನನ್ನು ತಿನ್ನಲು ಬಯಸುತ್ತೀರಿ ಎಂದು ಕೇಳಿದ್ದಾರೆ. ಈ ಸಂಭಾಷಣೆ ಕೊನೆಗೆ 'ಹಾಟ್ ಮಿಠಾಯಿ ಸಾಸ್ ಮತ್ತು ವೆನಿಲ್ಲಾ ಐಸ್ ಕ್ರೀಮ್' ಜೊತೆ ಅಂತಿಮಗೊಂಡಿದೆ. ಸ್ಕ್ರೀನ್‌ಶಾಟ್‌ನ ಕೆಳಗೆ, ನಾನು ಈ ಸಂಭಾಷಣೆಯನ್ನು ಇಷ್ಟಪಡುತ್ತೇನೆ ಎಂದು ಕರೀನಾ ಬರೆದಿದ್ದಾರೆ.

ಡಿಸೆಂಬರ್ 29 ರಂದು ರಿಯಾ ಅವರು ಮತ್ತು ಅವರ ಪತಿ ಕರಣ್ ಬೂಲಾನಿ ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು.

ABOUT THE AUTHOR

...view details