ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಅವರ ಪತಿ, ನಟ ಸೈಫ್ ಅಲಿ ಖಾನ್ ಅವರಿಗೆ 50 ವರ್ಷದ ಸಂಭ್ರಮ. ಈ ವಿಶೇಷ ದಿನದಂದು ಕರೀನಾ ತಮ್ಮ ಪತಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಸೈಫ್ ಅಲಿ ಖಾನ್ ಅವರ 50 ವರ್ಷಗಳ ಪಯಣವನ್ನು ಚಿತ್ರಿಸುವ ಸುಂದರ ವಿಡಿಯೋವೊಂದನ್ನ ಕರೀನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಜನ್ಮದಿನದ ಶುಭಾಶಯಗಳು. ಸೈಫ್ ಅವರ 50 ನೇ ವರ್ಷದ ಸಂಭ್ರಮಕ್ಕೆ ಅವರ 50 ವರ್ಷಗಳ ಪಯಣವನ್ನು ಸೆರೆಹಿಡಿಯುವ ವಿಡಿಯೋವನ್ನು ನಾನು ಮಾಡಿದ್ದೇನೆ. ಜನ್ಮದಿನದ ಶುಭಾಶಯಗಳು.. ಎಂದು ಶೀರ್ಷಿಕೆ ನೀಡಿದ್ದಾರೆ.