ನವದೆಹಲಿ: ನಟಿ ಕರೀನಾ ಕಪೂರ್ ಖಾನ್ 2021 ಕ್ಕೆ ಕಾತರದಿಂದ ಕಾಯುತ್ತಿದ್ದಾರಂತೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಜಗತ್ತಿನಾದ್ಯಂತ ಜನರು ಯಾವ ಭಾವನೆ ಹೊಂದಿದ್ದಾರೆ ಎಂಬುವುದರ ಕುರಿತಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.
ಆಲೋಚನೆಗಳಲ್ಲಿ ಮಗ್ನಳಾಗಿ ಮಂಚದ ಮೇಲೆ ಕುಳಿತ ಆಕೆ, ಬಿಳಿ ಜಾಕೆಟ್, ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಥ್ರೋಬ್ಯಾಕ್ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಈ ಪೋಸ್ಟ್ನ ಶೀರ್ಷಿಕೆಯಲ್ಲಿ "2021ಕ್ಕಾಗಿ ಕಾಯುತ್ತಿದ್ದೇನೆ ..." ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಉತ್ತರವಾಗಿ ಅವರ ಅನೇಕ ಫಾಲೋವರ್ಸ್ ಕಾಮೆಂಟ್ ವಿಭಾಗದಲ್ಲಿ 'ನಾವೂ ಕೂಡಾ' ಎಂದು ಪ್ರತ್ಯುತ್ತರ ನೀಡಿದ್ದಾರೆ.
ಬೇಬೊ ಕಳೆದ ವಾರವಷ್ಟೇ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು 20 ವರ್ಷಗಳನ್ನು ಪೂರೈಸಿದ್ದಾರೆ. ಅವರ ಮೊದಲ ಚಿತ್ರ 'ರೆಫ್ಯೂಜಿ'ಯ ಮೊದಲ ಶಾಟ್ನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಎರಡು ದಶಕಗಳ ಆಚರಣೆಯನ್ನು ಆಚರಿಸಿಕೊಂಡಿದ್ದಾರೆ.
ಕರೀನಾ ರೊಮ್ಯಾಂಟಿಕ್ ಚಿತ್ರಗಳಲ್ಲೂ ಸಹ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಐತಿಹಾಸಿಕ ಚಿತ್ರ ಅಶೋಕ, 2001 ರಲ್ಲಿ ಬಂದ ಫ್ಯಾಮಿಲಿ ಎಂಟರ್‌ಟೈನರ್ ಕಭಿ ಖುಷಿ ಕಭಿ ಘಮ್‌ನ ನಟನೆಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬಳಿಕ ಅನೇಕ ಹಿಟ್ ಚಿತ್ರಗಳ ಸಾಲನ್ನೇ ಅವರು ಹೊಂದಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಚಿತ್ರ ಜಬ್ ವಿ ಮೆಟ್ಗೆ ಆಕೆಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡಾ ಲಭಿಸಿತ್ತು.