ಹೈದರಾಬಾದ್:ಬಾಲಿವುಡ್ ತಾರೆಯರು ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಕಳೆದ ಎರಡು ವರ್ಷಗಳಿಂದ ಎಲ್ಲ ಆಚರಣೆಗಳನ್ನು ಕಿತ್ತುಕೊಂಡಿದೆ. ಇದರ ಹೊರತಾಗಿಯೂ, ಬಾಲಿವುಡ್ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ಹೊಸ ವರ್ಷವನ್ನು ಮುಕ್ತವಾಗಿ ಆಚರಿಸಿಕೊಂಡಿದ್ದಾರೆ. ಈ ನಡುವೆ ಕೊರೊನಾಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ಕರೀನಾ ಕಪೂರ್ ಖಾನ್ ಅವರು 2021ರ ನೆನಪುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವೊಂದನ್ನು ಶೇರ್ ಮಾಡಿಕೊಂಡು, ಇದು 2021ರ ಅತ್ಯುತ್ತಮ ನೆನಪು ಎಂದು ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಖಾನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವರ್ಷ ಜನಿಸಿದ ತನ್ನ ಎರಡನೇ ಮಗ ಜಹಾಂಗೀರ್ ಅಲಿ ಖಾನ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಜೆಹ್ ತನ್ನ ತುಂಟತನದ ಶೈಲಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಂಡಿರುವ ಕರೀನಾ, 'ಜೆಹ್ ಅವರ ಎರಡು ಹಲ್ಲುಗಳು 2021 ರ ವರ್ಷದ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದಿರುವ ಅವರು, ❤️❤️❤️ ಡಿಸೆಂಬರ್ 31, #MeraBeta#ನನ್ನ ಮಗ,# ಹೊಸ ವರ್ಷ ಎಲ್ಲರಿಗೂ ಒಳಿತು ಮಾಡಲಿ' ಎಂದು ಬರೆದುಕೊಂಡಿದ್ದಾರೆ.(His two teeth…the best part of 2021❤️❤️❤️#31estDecember#MeraBeta# Blessed New year all…)