ಕರ್ನಾಟಕ

karnataka

ETV Bharat / sitara

ಬಾಬ್​ ಮಾರ್ಲಿ ಹುಟ್ಟುಹಬ್ಬಕ್ಕೆ 'ಒನ್​ ಲವ್​' ರೀ ರಿಲೀಸ್​: ಯುನಿಸೆಫ್​ಗಾಗಿ ಕೈ ಜೋಡಿಸಿದ ಕರೀನಾ - ನಟಿ ಕರೀನಾ ಕಪೂರ್

ಬಾಬ್ ಮಾರ್ಲಿಯ 75 ನೇ ಹುಟ್ಟುಹಬ್ಬದ ವರ್ಷಾಚರಣೆಯ ಸಂದರ್ಭದಲ್ಲಿ ಈ ಹಾಡು ಮತ್ತು ಸಂಗೀತ ವಿಡಿಯೊ ಬರಲಿದೆ. ಕೋವಿಡ್ -19 ಪೀಡಿತ ಮಕ್ಕಳಿಗಾಗಿ ಯುನಿಸೆಫ್​ನ ಕಾರ್ಯವನ್ನು ಕರೀನಾ ಬೆಂಬಲಿಸುತ್ತಾರೆ.

kareena
ಕರೀನಾ

By

Published : Jul 18, 2020, 2:16 PM IST

ನ್ಯೂಯಾರ್ಕ್: ಮಾರ್ಲಿ ಕುಟುಂಬದ ಸದಸ್ಯರು ದಿವಂಗತ ಬಾಬ್ ಮಾರ್ಲಿ ಅವರ ಐಕಾನಿಕ್ ಗೀತೆಯಾದಂತಹ 'ಒನ್ ಲವ್'ನ ಮರು ರೂಪಿಸಲಾದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಟಿ ಕರೀನಾ ಕಪೂರ್ ಮತ್ತು ಬ್ರಿಟಿಷ್ ತಾರೆ ಲೆನಾ ಹೆಡೆ ಸೇರಿದಂತೆ ಜಾಗತಿಕ ಕಲಾವಿದರು, ಕೋವಿಡ್ -19 ಪೀಡಿತ ಮಕ್ಕಳಿಗಾಗಿ ಯುನಿಸೆಫ್​ನ ಕಾರ್ಯವನ್ನು ಬೆಂಬಲಿಸುತ್ತಾರೆ.

ಕೋವಿಡ್​ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮಕ್ಕಳ ಜೀವನವನ್ನು ಮರುರೂಪಿಸಿ, ಅವರಿಗೆ ಸಹಾಯ ಮಾಡಲು ಯುನಿಸೆಫ್ ಮಾಡಿದ ಕರೆಗೆ ಪ್ರತಿಕ್ರಿಯೆಯಾಗಿ ಈ ಹಾಡನ್ನು ದಿವಂಗತ ಕಲಾವಿದನನ್ನು ಗೌರವಿಸಲು ಮಾರ್ಲಿ ಕುಟುಂಬ ರೆಕಾರ್ಡ್ ಮಾಡಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

'ಒನ್​ ಲವ್​ ಒನ್ ಹಾರ್ಟ್​, ನಾವೆಲ್ಲರೂ ಒಟ್ಟಾಗಿ ಎಲ್ಲರಿಗೂ ಉತ್ತಮ ಜಗತ್ತನ್ನು ಮರು ರೂಪಿಸೋಣ' ಎಂದು ಕರೀನಾ ಕಪೂರ್ ತನ್ನ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡು ಈ ಮೇಲಿನ ಶೀರ್ಷಿಕೆ ನೀಡಿದ್ದಾರೆ.

ಬಾಬ್ ಮಾರ್ಲಿಯ 75 ನೇ ಹುಟ್ಟುಹಬ್ಬದ ವರ್ಷಾಚರಣೆಯ ಸಂದರ್ಭದಲ್ಲಿ ಈ ಹಾಡು ಮತ್ತು ಸಂಗೀತ ವಿಡಿಯೋ ಬರಲಿದೆ. ಇದರಲ್ಲಿ ಬ್ರೆಜಿಲ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಭಾರತ, ಜಮೈಕಾ, ಮಾಲಿ, ನ್ಯೂಜಿಲ್ಯಾಂಡ್​, ನೈಜೀರಿಯಾ, ಸುಡಾನ್, ಸಿರಿಯಾ, ಯುನೈಟೆಡ್‌ನ ಕಲಾವಿದರು ಮತ್ತು ಸಂಗೀತಗಾರರು ರಾಜ್ಯ ಮತ್ತು ಯುನೈಟೆಡ್ ಸ್ಟೇಟ್ಸ್​ನ ಕಲಾವಿದರು ಭಾಗವಹಿಸಲಿದ್ದಾರೆ.

ABOUT THE AUTHOR

...view details