ಕರ್ನಾಟಕ

karnataka

ETV Bharat / sitara

ಆಲಿಯಾ-ರಣವೀರ್ ಅಭಿನಯದ ಸಿನಿಮಾ ನಿರ್ದೇಶಿಸ್ತಾರಾ ಕರಣ್ ಜೋಹರ್? - ಪ್ರೇಮ್​ಕಹಾನಿ

ನಿರ್ಮಾಪಕ ಕರಣ್ ಜೋಹರ್ ತನ್ನ ಮಹತ್ವಾಕಾಂಕ್ಷೆಯ ನಾಟಕ ‘ತಖ್ತ್‌’ ಅನ್ನು ಮರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಖ್ತ್ ಅನ್ನು ವೆಬ್ ಸರಣಿಯಾಗಿ ಪರಿವರ್ತಿಸುವ ಚಿಂತನೆಯಲ್ಲಿದ್ದಾರಂತೆ ಕರಣ್‌ ಜೋಹರ್..

ಆಲಿಯಾ-ರಣವೀರ್ ಅಭಿನಯದ ಸಿನಿಮಾ ನಿರ್ದೇಶಿಸ್ತಾರಾ ಕರಣ್ ಜೋಹರ್?
ಆಲಿಯಾ-ರಣವೀರ್ ಅಭಿನಯದ ಸಿನಿಮಾ ನಿರ್ದೇಶಿಸ್ತಾರಾ ಕರಣ್ ಜೋಹರ್?

By

Published : Jun 5, 2021, 5:42 PM IST

ಹೈದರಾಬಾದ್ :ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್​ ಮತ್ತೆ ನಿರ್ದೇಶನದತ್ತ ಒಲವು ತೋರಿದ್ದಾರೆ. ಪ್ರೇಮ್​ಕಹಾನಿ ಎಂಬ ಚಿತ್ರಕ್ಕೆ ಕರಣ್ ಆ್ಯಕ್ಷನ್​-ಕಟ್ ಹೇಳಲಿದ್ದು, ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್​​​​​​ ನಟಿಸಲಿದ್ದಾರೆ ಎಂಬ ವದಂತಿ ಹರಡಿತ್ತು.

ಅಲ್ಲದೆ ಕರಣ್ ಅವರು ನಿರ್ದೇಶಿಸಲಿರುವ ಚಿತ್ರದಲ್ಲಿ ಗಲ್ಲಿಭಾಯ್ ತಾರೆಗಳಾದ ಆಲಿಯಾ ಮತ್ತು ರಣವೀರ್​​ ಮತ್ತೆ ಒಂದಾಗುತ್ತಿದ್ದಾರೆ. ಬಾಲಿವುಡ್ ಖ್ಯಾತ ಜೋಡಿ ಮತ್ತೆ ಒಂದಾಗುತ್ತಿರುವುದಕ್ಕೆ ಅಭಿಮಾನಿಗಳು ಸಹ ಉತ್ಸುಕರಾಗಿದ್ದರು.

ಆದರೆ, ಈ ಎಲ್ಲಾ ವದಂತಿಗಳಿಗೆ ನಿರ್ಮಾಪಕ ಕರಣ್ ಜೋಹರ್​ ತೆರೆ ಎಳೆದಿದ್ದಾರೆ. ರಣವೀರ್ ಮತ್ತು ಆಲಿಯಾ ಅವರೊಂದಿಗೆ ಪ್ರೇಮ್ ಕಹಾನಿ ಮಾಡಲು ಕರಣ ಜೋಹರ್ ನಿರಾಕರಿಸಿದ್ದಾರೆ. ಚಲನಚಿತ್ರ ನಿರ್ಮಾಪಕರಾಗಿರುವ ಅವರು, ಯಾವುದೇ ಚಿತ್ರವನ್ನು ನಿರ್ದೇಶಿಸುವುದಿಲ್ಲ ಎಂದಿದ್ದಾರಂತೆ.

ನಿರ್ಮಾಪಕ ಕರಣ್ ಜೋಹರ್ ತನ್ನ ಮಹತ್ವಾಕಾಂಕ್ಷೆಯ ನಾಟಕ ‘ತಖ್ತ್‌’ ಅನ್ನು ಮರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಖ್ತ್ ಅನ್ನು ವೆಬ್ ಸರಣಿಯಾಗಿ ಪರಿವರ್ತಿಸುವ ಚಿಂತನೆಯಲ್ಲಿದ್ದಾರಂತೆ ಕರಣ್‌ ಜೋಹರ್.

ABOUT THE AUTHOR

...view details