ಕರ್ನಾಟಕ

karnataka

ETV Bharat / sitara

ವರುಣ್​ ಧವನ್​ - ನತಾಶಾ ವಿವಾಹಕ್ಕೆ ಶುಭಹಾರೈಸಿದ ಕರಣ್​ ಜೋಹರ್​

ಅಲಿಬಾಗ್‌ನ ಐಶಾರಾಮಿ ರೆಸಾರ್ಟ್‌ನ 'ದಿ ಮ್ಯಾನ್ಶನ್ ಹೌಸ್‌'ನಲ್ಲಿ ಜ.24ರಂದು ನಟ ವರುಣ್​ ಧವನ್​ ಮತ್ತು ಫ್ಯಾಷನ್​ ಡಿಸೈನರ್​ ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ವಿವಾಹಕ್ಕೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಶುಭ ಹಾರೈಸಿದ್ದಾರೆ.

By

Published : Jan 25, 2021, 11:38 AM IST

Karan Johar
ಕರಣ್​ ಜೋಹಾರ್

ನವದೆಹಲಿ: ನಟ ವರುಣ್ ಧವನ್​ನನ್ನು ಬಾಲಿವುಡ್​ಗೆ ಪರಿಚಯಿಸಿದ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ವರುಣ್​ ಮತ್ತು ನತಾಶಾ ವಿವಾಹಕ್ಕೆ ಆಗಮಿಸಿದ ಕೆಲವೇ ಕೆಲವು ಗಣ್ಯರಲ್ಲಿ ಒಬ್ಬರು.

ಅಲಿಬಾಗ್‌ನ ಐಶಾರಾಮಿ ರೆಸಾರ್ಟ್‌ನ 'ದಿ ಮ್ಯಾನ್ಶನ್ ಹೌಸ್‌'ನಲ್ಲಿ ಜ.24ರಂದು ನಟ ವರುಣ್​ ಧವನ್​ ಮತ್ತು ಫ್ಯಾಷನ್​ ಡಿಸೈನರ್​ ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನು ವರುಣ್​ ಧವನ್​ ಮತ್ತು ನತಾಶಾ ಫೋಟೋ ಹಂಚಿಕೊಂಡ ಕರಣ್​, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ಈ ಪೋಸ್ಟ್ ಬರೆಯುವಾಗ ನಾನು ಅನೇಕ ಭಾವನೆಗಳು ಮತ್ತು ನೆನಪುಗಳಿಂದ ತುಂಬಿದ್ದೇನೆ. ಗೋವಾದಲ್ಲಿ ಈ ಮಗುವನ್ನು ಮೊದಲ ಬಾರಿ ಭೇಟಿಯಾದೆ. ಆ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಉದ್ದ ಕೂದಲು, ಅವನ ದೃಷ್ಟಿಯಲ್ಲಿ ದೊಡ್ಡ ಕನಸುಗಳು ಇವೆಲ್ಲವು ಕಾಣುತ್ತಿತ್ತು. ಕೆಲವು ವರ್ಷಗಳ ನಂತರ ಅವರು ಎಂಎನ್‌ಐಕೆನಲ್ಲಿ ನನ್ನ ಸಹಾಯಕರಾಗಿದ್ದ. ನಾನು ಅವನ ದೃಢ ನಿಶ್ಚಯದ ಪ್ರಾಮಾಣಿಕತೆ ಮೌನವಾಗಿ ಗಮನಿಸಿದ್ದೇನೆ" ಎಂದಿದ್ದಾರೆ.

"ನನ್ನ ಹುಡುಗನು ಬೆಳೆದು ತನ್ನ ಜೀವನದಲ್ಲಿ ಈ ಸುಂದರ ಹಂತಕ್ಕೆ ಸಿದ್ಧನಾಗಿದ್ದಾನೆ. ನತಾಶಾ ಮತ್ತು ವರುಣ್​ಗೆ ಅಭಿನಂದನೆಗಳು! ನನ್ನ ಆಶೀರ್ವಾದ ಮತ್ತು ಪ್ರೀತಿ ಶಾಶ್ವತವಾಗಿ ಇರುತ್ತದೆ " ಎಂದು ಶುಭಹಾರೈಸಿದ್ದಾರೆ.

ABOUT THE AUTHOR

...view details