ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಬಾಲಿವುಡ್ ನಟಿ ಕಂಗನಾ ರಣಾವತ್, ಕೆಲವು ಫಿಲ್ಮ್ ಮೇಕರ್ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೀಗ ಕಂಗನಾ ಬಾಲಿವುಡ್ನ ಮೂವರು ಹೆಸರಾಂತ ಫಿಲ್ಮ್ ಮೇಕರ್ಗಳು ಸೇರಿ ಸುಶಾಂತ್ನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್ ಮೂವರೂ ಸೇರಿ ಸುಶಾಂತ್ನನ್ನು ಕೊಂದಿದ್ದಾರೆ. ಇವರೊಂದಿಗೆ ಕೆಲವು ಪತ್ರಕರ್ತರು ಹಾಗೂ ಜನರು ಸುಶಾಂತ್ಗೆ ಮಾನಸಿಕ ಕಿರುಕುಳ ನೀಡಿದ್ದು ನೀವೂ ಕೂಡಾ ಸುಶಾಂತ್ ಸಾವಿಗೆ ಹೊಣೆಯಾಗಿದ್ದೀರಿ ಎಂದು ಕಂಗನಾ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್, ರಾಜೀವ್ ಮಸಂದ್, ರಕ್ತಹೀರುವ ರಣಹದ್ದುಗಳಂತಿರುವ ಮಾಧ್ಯಮವು ಸುಶಾಂತ್ನನ್ನು ಬೆದರಿಸಿ, ಶೋಷಣೆ ಮಾಡಿ, ಕಿರುಕುಳ ನೀಡಿ ಕೊಂದಿವೆ, ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಕರಣ್ ಜೋಹರ್ ತಮ್ಮ ಮಕ್ಕಳ ಕುರಿತಾಗಿ ಬರೆದಿರುವ ಪುಸ್ತಕದ ಬಗ್ಗೆ ಕೂಡಾ ಕಂಗನಾ ಕಿಡಿ ಕಾರಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ತಾವು ದತ್ತು ಪಡೆದಿರುವ ಅವಳಿ ಮಕ್ಕಳ ಬಗ್ಗೆ ಹಾಗೂ ಮಕ್ಕಳನ್ನು ಸಾಕುವ ಅನುಭವದ ಬಗ್ಗೆ ಬರೆದಿರುವ ಪುಸ್ತಕವನ್ನು ಪ್ರಮೋಟ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ ಕಂಗನಾ ಈ ಆರೋಪ ಮಾಡಿದ್ದಾರೆ.
ಫಿಲ್ಮ್ ಮೇಕರ್ಗಳನ್ನು ಸುಶಾಂತ್ ಸಾವಿಗೆ ಹೊಣೆ ಮಾಡಿದ ಕಂಗನಾ ಇದಕ್ಕೂ ಮುನ್ನ ಕಂಗನಾ, ಕರಣ್ ಜೋಹರ್ನನ್ನು ಉದ್ದೇಶಿಸಿ ಬಾಲಿವುಡ್ ಚಿತ್ರರಂಗದಲ್ಲಿ ಸಿನಿಮಾ ಮಾಫಿಯಾಗೆ ಕರಣ್ ಜೋಹರ್ ಪ್ರಮುಖ ಕಿಂಗ್ಪಿನ್ ಎಂದು ಆರೋಪಿಸಿದ್ದರು. 'ಎಷ್ಟೋ ಜನರ ಜೀವನವನ್ನು ಬಲಿ ಪಡೆದು, ಎಷ್ಟೋ ಜನರ ಜೀವನವನ್ನು ಹಾಳು ಮಾಡಿ ಆರಾಮವಾಗಿ ತಿರುಗಾಡಿಕೊಂಡು ಇದ್ದಾರೆ. ಇದುವರೆಗೂ ಆತನ ಮೇಲೆ ಕ್ರಮ ಕೈಗೊಂಡಿಲ್ಲ, ಈಗಲಾದರೂ ಅದನ್ನು ಬಯಸಬಹುದಾ..?' ಎಂದು ಪ್ರಶ್ನಿಸಿ ಕಂಗನಾ ಪ್ರಧಾನಿ ಮೋದಿಗೆ ಆ ಟ್ವೀಟ್ ಟ್ಯಾಗ್ ಮಾಡಿದ್ದರು.
ಜೂನ್ 14 ರಂದು ಸುಶಾಂತ್ ಸಾವನ್ನಪ್ಪಿದಾಗಿನಿಂದ ಬಾಲಿವುಡ್ನಲ್ಲಿ ಸ್ವಜಪಕ್ಷಪಾತದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅಲ್ಲದೆ ಕೆಲವರು ಸ್ಟಾರ್ ಕಿಡ್ಗಳ ಚಿತ್ರಗಳನ್ನು ಬಹಿಷ್ಕರಿಸಿದ್ದಾರೆ. ಮಹೇಶ್ ಭಟ್ ಹಾಗೂ ಕರಣ್ ಜೋಹರ್ ಇಬ್ಬರನ್ನೂ ಸುಶಾಂತ್ , ಕಂಗನಾ ಅಭಿಮಾನಿಗಳು ನೆಪೋಟಿಸಂಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಲೇ ಇದ್ದಾರೆ.